ಕೆಲಸದಾಕೆಯನ್ನು ಅತ್ಯಾಚಾರವೆಸಗಿದ ಗ್ಯಾಸ್ ಸ್ಟೋವ್ ಅಂಗಡಿ ಮಾಲಿಕನ ಬಂಧನ

ಕೆಲಸದಾಕೆಯನ್ನು ಅತ್ಯಾಚಾರವೆಸಗಿದ ಗ್ಯಾಸ್ ಸ್ಟೋವ್ ಅಂಗಡಿ ಮಾಲಿಕನ ಬಂಧನ

ಮಂಗಳೂರು: ಮನೆಯ ಕೆಲಸದಾಕೆಯನ್ನು ಅತ್ಯಾಚಾರವೆಸಗಿ ಗರ್ಬವತಿಯಾಗಿಸಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಪಾಂಡೇಶ್ವರ ಪೊಲೀಸರು ಬಂಧಿಸಿದ್ದಾರೆ.

ಬಂಧಿತನನನ್ನು ಬೆಂದೂರ್ ವೆಲ್ ನಿವಾಸಿ ರವಿ ಉಚ್ಚಿಲ್ (65) ಎಂದು ಗುರುತಿಸಲಾಗಿದೆ.

ರವಿ ಉಚ್ಚೀಲ್ ಗ್ಯಾಸ್ಕೋ ಸ್ಟೋವ್ ರಿಪೆರಿ ಶಾಪನ್ನು ಬೆಂದೂರ್ ವೆಲ್ ನಲ್ಲಿ ನಡೆಸುತ್ತಿದ್ದು, ಮಹಿಳೆಯು ಮೂರು ವರ್ಷಗಳಿಂದ ಆತನ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದು ರವಿ ಉಚ್ಚೀಲ್ ಸತತವಾಗಿ ಆಕೆಯನ್ನು ಲೈಂಗಿಕವಾಗಿ ಪೀಡಿಸುತ್ತಿದ್ದು, ಗರ್ಭವತಿಯಾಗಿದ್ದಳು ಎನ್ನಲಾಗಿದೆ. ಆಕೆ ನಾಲ್ಕು ತಿಂಗಳ ಗರ್ಭವತಿಯಾಗಿದ್ದಾಗ ಅಬಾರ್ಷನ್ ಮಾಡಿಸುವಂತೆ ಪೀಡಿಸುತ್ತಿದ್ದು ಮಹಿಳೆ ತನ್ನ ಮನೆಯವರಿಗೆ ಮಾಹಿತಿ ನೀಡಿದ್ದು ಅದರಂತೆ ಪಾಂಡೇಶ್ವರ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಮಹಿಳೆಯ ದೂರಿನಂತೆ ಪೊಲೀಸರು ರವಿ ಉಚ್ಚಿಲ್ ನನ್ನು ಬಂಧಿಸಿದ್ದು ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದಾರೆ.