ಕೆ.ಎಂ.ಸಿ ಆಸ್ಪತ್ರೆ ಅತ್ತಾವರದಲ್ಲಿ ‘ಆಟಿದ ಸಂಭ್ರಮ’ ಸಂಭ್ರಮದ ಆಚರಣೆ
ಮಂಗಳೂರು: ಮಾಹೆ (MAHE) ಮಣಿಪಾಲದ ಅಂಗಸಂಸ್ಥೆಯಾದ ಕೆ.ಎಂ.ಸಿ ಆಸ್ಪತ್ರೆ ಅತ್ತಾವರದಲ್ಲಿ ತುಳುನಾಡಿನ ಸಾಂಸ್ಕೃತಿಕ ಪರಂಪರೆ, ಖಾದ್ಯ ಹಾಗೂ ಒಗ್ಗಟ್ಟನ್ನು ಸಾರುವ ‘ಆಟಿದ ಸಂಭ್ರಮ’ ಸಾಂಸ್ಕೃತಿಕ ಕಾರ್ಯಕ್ರಮವು ಅತ್ಯಂತ ವಿಜೃಂಭಣೆಯಿಂದ ಜರುಗಿತು.
ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲಾ ಅತಿಥಿ ಮಹೋದಯರನ್ನು ತುಳುನಾಡಿನ ಜಾನಪದ ಕಲೆಯಾದ ‘ಆಟಿ ಕಳಂಜ’ ನೃತ್ಯದ ಮೂಲಕ ಸಾಂಪ್ರದಾಯಿಕವಾಗಿ ಸ್ವಾಗತಿಸಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕೆ.ಎಂ.ಸಿ ಆಸ್ಪತ್ರೆಯ ಮೂತ್ರಪಿಂಡ ಶಾಸ್ತ್ರ (ನೆಫ್ರಾಲಜಿ) ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ಭೂಷಣ್ ಶೆಟ್ಟಿ ಅವರು ಮಾತನಾಡಿ, “ತುಳುನಾಡಿನಲ್ಲಿ ಆಟಿ ತಿಂಗಳಿಗೆ ಅತ್ಯಂತ ವಿಶೇಷವಾದ ಸ್ಥಾನವಿದೆ. ಆಟಿ ಅಮಾವಾಸ್ಯೆ, ಆಟಿ ಕಳಂಜ ನೃತ್ಯ ಹಾಗೂ ಆಟಿ ತಿಂಗಳಲ್ಲಿ ಆಚರಿಸಲಾಗುವ ವೈವಿಧ್ಯಮಯ ಆಚಾರ-ವಿಚಾರಗಳ ಹಿಂದಿರುವ ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಮಹತ್ವವನ್ನು” ವಿವರಿಸಿದರು.

ಕಾರ್ಯಕ್ರಮದ ಅಂಗವಾಗಿ ಕೆ.ಎಂ.ಸಿ ಆಸ್ಪತ್ರೆ ಅತ್ತಾವರದ ಸಿಬ್ಬಂದಿಗಳಿಗಾಗಿ ಆಯೋಜಿಸಲಾಗಿದ್ದ ‘ಆಟಿ ತಿಂಡಿ/ಖಾದ್ಯ ಸ್ಪರ್ಧೆ’ (Ati Food Competition) ಯ ವಿಜೇತರಿಗೆ ಸಭಾ ಕಾರ್ಯಕ್ರಮದಲ್ಲಿ ಬಹುಮಾನಗಳನ್ನು ವಿತರಿಸಿ ಗೌರವಿಸಲಾಯಿತು.
ವೇದಿಕೆ ಕಾರ್ಯಕ್ರಮದ ಬಳಿಕ ಆಸ್ಪತ್ರೆಯ ಸಿಬ್ಬಂದಿಗಳಿಂದ ಮನರಂಜನಾತ್ಮಕ ಹಾಗೂ ತುಳುನಾಡಿನ ಸಾಂಸ್ಕೃತಿಕ ವೈಭವವನ್ನು ಬಿಂಬಿಸುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರದರ್ಶನಗೊಂಡವು.

ಸಮಾರಂಭದಲ್ಲಿ ಮಾಹೆ ಮಣಿಪಾಲ ಮಂಗಳೂರು ಕ್ಯಾಂಪಸ್ ನ ಪ್ರೊ ವೈಸ್ ಚಾನ್ಸೆಲರ್ ಡಾ. ದಿಲೀಪ್ ಜಿ. ನಾಯ್ಕ್ ಕೆ.ಎಂ.ಸಿ ಮಂಗಳೂರಿನ ಡೀನ್ ಡಾ. ಬಿ. ಉಣ್ಣಿಕೃಷ್ಣನ್, ಕೆ.ಎಂ.ಸಿ ಆಸ್ಪತ್ರೆ ಅತ್ತಾವರದ ವೈದ್ಯಕೀಯ ಅಧೀಕ್ಷಕರಾದ ಡಾ. ಚಕ್ರಪಾಣಿ ಎo. ಉಪಸ್ಥಿತರಿದ್ದರು.












