ಕೇಂದ್ರ ಸರ್ಕಾರದಿಂದ ಉಡುಪಿಗೆ ಸಿ ಜಿ ಎಚ್ ವೆಲ್ನೆಸ್ ಸೆಂಟರ್ ಮಂಜೂರು : ಯಶ್ಪಾಲ್ ಸುವರ್ಣ ಸ್ವಾಗತ

Spread the love

ಕೇಂದ್ರ ಸರ್ಕಾರದಿಂದ ಉಡುಪಿಗೆ ಸಿ ಜಿ ಎಚ್ ವೆಲ್ನೆಸ್ ಸೆಂಟರ್ ಮಂಜೂರು: ಯಶ್ಪಾಲ್ ಸುವರ್ಣ ಸ್ವಾಗತ

ಭಾರತ ಸರಕಾರದ ನಿವೃತ್ತ ನೌಕರರ ಬಹುದಿನದ ಬೇಡಿಕೆ ಆದ ಸೆಂಟ್ರಲ್ ಗವರ್ನಮೆಂಟ್ ಹೆಲ್ತ್ ಸ್ಕೀಮ್ ವೆಲ್ನೆಸ್ ಸೆಂಟರ್ (C G H S) ಅನ್ನು ಉಡುಪಿಯಲ್ಲಿ ತೆರೆಯಲು ಅನುಮೋದನೆ ನೀಡಿದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ನಿರ್ಧಾರವನ್ನು ಉಡುಪಿ ಶಾಸಕ ಶ್ರೀ ಯಶ್ ಪಾಲ್ ಸುವರ್ಣ ಸ್ವಾಗತಿಸಿದ್ದಾರೆ.

ಉಡುಪಿ ಹಾಗೂ ನೆರೆಯ ಜಿಲ್ಲೆಗಳ 46 ಕ್ಕೂ ಅಧಿಕ ಕೇಂದ್ರ ಸರಕಾರದ ಇಲಾಖೆಗಳ ಸುಮಾರು 4,500 ಉದ್ಯೋಗಿಗಳಿಗೆ ಹಾಗೂ 9,000 ಕ್ಕೂ ಅಧಿಕ ನಿವೃತ್ತ ಉದ್ಯೋಗಿಗಳಿಗೆ ಇದರಿಂದ ಅನುಕೂಲವಾಗಿದ್ದು,

ಉಡುಪಿಗೆ ಈ ವೆಲ್ನೆಸ್ ಸೆಂಟರ್ ಮಂಜೂರು ಮಾಡಿದ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಡಾ. ಮನ್ ಸುಖ್ ಮಾಂಡವಿಯ ಹಾಗೂ ಈ ಬಗ್ಗೆ ಶಿಫಾರಸ್ಸು ಮಾಡಿ ಮಂಜೂರಾತಿಗೆ ವಿಶೇಷ ಮುತುವರ್ಜಿ ವಹಿಸಿದ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವರೂ, ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಸಂಸದರಾದ ಶೋಭಾ ಕರಂದ್ಲಾಜೆ ಅವರಿಗೆ ಉಡುಪಿಯ ಜನತೆಯ ಪರವಾಗಿ ಅಭಿನಂದನೆ ಸಲ್ಲಿಸುವುದಾಗಿ ಯಶ್ ಪಾಲ್ ಸುವರ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love