ಕೊರೋನಾ ‘ಫ್ರಂಟ್ ಲೈನ್ ವಾರಿಯರ್ಸ್’ ನ ಸ್ವಯಂ ಸೇವಕರಾಗಲು ಯುವಕರಿಗೆ ಶಾಸಕ ರಘುಪತಿ ಭಟ್ ಕರೆ

Spread the love

ಕೊರೋನಾ ‘ಫ್ರಂಟ್ ಲೈನ್ ವಾರಿಯರ್ಸ್’ ನ ಸ್ವಯಂ ಸೇವಕರಾಗಲು ಯುವಕರಿಗೆ ಶಾಸಕ ರಘುಪತಿ ಭಟ್ ಕರೆ

ಉಡುಪಿ : ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದ ಇದರ ವಿರುದ್ದ ಹೋರಾಟಕ್ಕೆ ಫ್ರಂಟ್ ಲೈನ್ ವಾರಿಯರ್ ಗಳ ಕೊರತೆ ಎದ್ದು ಕಾಣುತ್ತಿದ್ದು ನಮಗೆ ಸ್ವಯಂ ಸೇವಕರ ಅಗತ್ಯವಿದೆ ಎಂದು ಉಡುಪಿ ಶಾಸಕ ರಘುಪತಿ ಭಟ್ ಹೇಳಿದ್ದಾರೆ.

ಈ ಕುರಿತು ವೀಡಿಯೋ ಸಂದೇಶದ ಮೂಲಕ ಯುವಕರಿಗೆ ಮನವಿ ಮಾಡಿರುವ ರಘುಪತಿ ಭಟ್ ಅವರು ಉಡುಪಿಯಲ್ಲಿ ಕೋರೋನಾ ಬಹಳಷ್ಟು ಹೆಚ್ಚಾಗುತ್ತಿದ್ದು, ಸಮುದಾಯಕ್ಕೆ ಕೋವಿಡ್ ಹರಡಿರುವ ಸೂಚನೆಗಳು ಕಂಡು ಬರುತ್ತಿವೆ. ನಮಗೆ ಫ್ರಂಟ್ಲೈನ್ ವಾರಿಯರ್ ಗಳ ಕೊರತೆ ಕಾಣುತ್ತಿದೆ ನಮಗೆ ಸ್ವಯಂ ಸೇವಕರ ಅಗತ್ಯವಿದೆ.

ಯಾರಾದ್ರೂ ಮೃತರಾದರೆ ಅಂತ್ಯ ಸಂಸ್ಕಾರ ನಡೆಸಲು, ಕೋವಿಡ್ ಪಾಸಿಟಿವ್ ಬಂದವರನ್ನು ಸಾಗಿಸಲು, ಆಂಬುಲೆನ್ಸ್ ನಲ್ಲಿ ಶಿಫ್ಟ್ ಮಾಡಲು ಸ್ವಯಂ ಸೇವಕರ ಅಗತ್ಯವಿದ್ದು ಅವರನ್ನು ಫ್ರಂಟ್ ಲೈನ್ ವಾರಿಯರ್ ಗಳಾಗಿ ತಂಡ ಸಿದ್ಧ ಮಾಡಬೇಕಿದೆ. ಇಂತಹ ಫ್ರಂಟ್ ಲೈನ್ ವಾರಿಯರ್ ತಂಡಕ್ಕೆ ಆರೋಗ್ಯವಂತ ಯುವಕರ ಅಗತ್ಯವಿದ್ದು, ಮನೆಯಲ್ಲಿ ಹಿರಿಯರಿಂದ ದೂರವಿರಲು ಅವಕಾಶವಿರುವ ಆಸಕ್ತ ಯುವಕರು ನೋಂದಾಯಿಸಿ ಕೊಳ್ಳುವಂತೆ ಅವರು ವಿನಂತಿ ಮಾಡಿದ್ದಾರೆ.

ನೋಂದಾಯಿಸಿಕೊಂಡ ಯುವಕರ ತಂಡಕ್ಕೆ ಸೂಕ್ತ ತರಬೇತಿ ನೀಡಲಾಗುವುದು ಅಲ್ಲದೆ ಅವರಿಗೆ ಸೋಂಕು ಬರದ ರೀತಿಯಲ್ಲಿ ಕರ್ತವ್ಯ ನಿರ್ವಹಿಸುವ ತರಬೇತಿ ನೀಡಲಾಗುತ್ತದೆ. ತರಬೇತಿ ಹೊಂದಿದ ಯುವಕರು ರಾತ್ರಿ-ಹಗಲು ಯಾವ ಸಮಯದಲ್ಲೂ ಕರೆ ಬಂದರೂ ಕೆಲಸ ಮಾಡಲು ಸಿದ್ಧವಿರಬೇಕು. ಈಗಾಗಲೇ ಕೆಲ ಯುವಕರು ಹೆಸರು ನೋಂದಾಯಿಸಿದ್ದು ಅವರಿಗೆ ತರಬೇತಿಯನ್ನು ಕೂಡ ನೀಡುತ್ತಿದ್ದೇವೆ. ಇನ್ನೂ ಬೇರೆ ಆಸಕ್ತ ಯುವಕರು ಇದ್ದಲ್ಲಿ ದಯವಿಟ್ಟು ಮುಂದೆ ಬನ್ನೀ ಎಂದು ಶಾಸಕರು ಮನವಿ ಮಾಡಿದ್ದಾರೆ.


Spread the love