ಕೊರೋನಾ ವೈರಸ್: ಉಡುಪಿಯಲ್ಲಿ ದುಬಾಯಿ ಯಿಂದ ಆಗಮಿಸಿದ 1 ವರ್ಷದ ಮಗುವಿಗೆ ಪಾಸಿಟಿವ್ ಪ್ರಕರಣ ದೃಢ

Spread the love

ಕೊರೋನಾ ವೈರಸ್: ಉಡುಪಿಯಲ್ಲಿ ದುಬಾಯಿ ಯಿಂದ ಆಗಮಿಸಿದ 1 ವರ್ಷದ ಮಗುವಿಗೆ ಪಾಸಿಟಿವ್ ಪ್ರಕರಣ ದೃಢ

ಉಡುಪಿ: ಶುಕ್ರವಾರ ಬೆಳಿಗ್ಗೆಯಷ್ಟೆಎರಡು ದಿನಗಳ ಹಿಂದೆ ಮಂಗಳೂರಿಗೆ ದುಬೈಯಿಂದ ಬಂದಿಳಿದ 5 ಮಂದಿಯಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿತ್ತು ಈಗ ಸಂಜೆ ಅದೇ ವಿಮಾನದಲ್ಲಿ ಬಂದ 1 ವರ್ಷದ ಹೆಣ್ಣು ಮಗುವಿಗೂ ಕೂಡ ಕೊರೋನಾ ಪಾಸಿಟಿವ್ ದೃಢಗೊಂಡಿದೆ ಎಂದು ಡಿ ಎಚ್ ಒ ಡಾ ಸುದೀರ್ ಚಂದ್ರ ಸೂಡ ಹೇಳಿದ್ದಾರೆ.

ದುಬೈ ನಿಂದ ಬಂದ 37 ವರ್ಷದ ಪತಿ ಹಾಗೂ 33 ವರ್ಷದ ಪತ್ನಿಗೆ ಬೆಳಿಗ್ಗೆ ಕೊರೋನಾ ಪಾಸಿಟಿವ್ ದೃಢಗೊಂಡಿತ್ತು ಈ ಅವರ 1 ವರ್ಷದ ಹೆಣ್ಣು ಮಗುವಿಗೂ ಕೂಡ ಕೊರೋನಾ ಸೋಂಕು ಇರುವುದು ಪತ್ತೆಯಾಗಿದೆ. ಇದರೊಂದಿಗೆ ಉಡುಪಿಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಆರಕ್ಕೇರಿದೆ.


Spread the love