ಕೊಲೆ ಯತ್ನ ಪ್ರಮುಖ ಆರೋಪಿ ಅರ್ಗ ಬಶೀರ್ ಬಂಧನ

Spread the love

ಕೊಲೆ ಯತ್ನ ಪ್ರಮುಖ ಆರೋಪಿ ಅರ್ಗ ಬಶೀರ್ ಬಂಧನ

ಮಂಗಳೂರು: ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಮಿಜಾರು ಬಳಿಯಲ್ಲಿ 2016 ನೇ ಜುಲೈ ತಿಂಗಳಲ್ಲಿ ನಡೆದ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿಯನ್ನು ದಸ್ತಗಿರಿ ಮಾಡುವಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಯಶಸ್ವಿಯಾಗಿರುತ್ತಾರೆ.

araga-basheer-254x300

ಬಂಧಿತನನ್ನು ಕೆ ಅಬ್ದುಲ್ ಬಶೀರ್ @ ಅರ್ಗ ಬಶೀರ್, (42), ತೋಡಾರು, ಬಡಗ ಎಡಪದವು, ಮಿಜಾರು, ಮಂಗಳೂರು ಎಂದು ಗುರುತಿಸಲಾಗಿದೆ

ಜುಲೈ 16ರಂದು ರಾತ್ರಿ ಸಮಯದಲ್ಲಿ ಶ್ರೀ ಧರ್ಮೆಂದ್ರ ಮತ್ತು ಅವರ ಸ್ನೇಹಿತ ದೇವು ಎಂಬವರು ಅವರ ಮನೆಗೆ ಹೋಗುತ್ತಿದ್ದ ಸಮಯ 4-5 ಬೈಕ್ ಗಳಲ್ಲಿ ಮತ್ತು ಕಾರುಗಳಲ್ಲಿ 10-15 ಜನರು ಬಂದು ಇವರನ್ನು ಅಡ್ಡಗಟ್ಟಿ ಅವರನ್ನು ಬೈಕ್ ನಿಂದ ಎಳೆದು ಹಾಕಿ ಅವಾಚ್ಯ ಶಬ್ದಗಳಿಂದ ಬೈದು ಮರದ ಸೊಂಟೆ ಹಾಗೂ ಮೊಳೆಯೊಡೆದ ಮರದ ತುಂಡಿನಿಂದ, ಕಬ್ಬಿಣದ ರಾಡ್ ನಿಂದ ಹಲ್ಲೆ ನಡೆಸಿದ್ದು, ಈ ಬಗ್ಗೆ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ.

ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗಳ ಪೈಕಿ ಪ್ರಮುಖ ಆರೋಪಿಯಾದ ಕೆ ಅಬ್ದುಲ್ ಬಶೀರ್ ಎಂಬಾತನ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಈತನನ್ನು ಮೂಡಬಿದ್ರಿಯ ಶಿರ್ತಾಡಿ ಬಳಿಯಿಂದ ವಶಕ್ಕೆ ಪಡೆದುಕೊಂಡು ಮುಂದಿನ ಕ್ರಮಕ್ಕಾಗಿ ಬಜಪೆ ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆರೋಪಿಗೆ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿರುತ್ತದೆ. ಆರೋಪಿ ಅಬ್ದುಲ್ ಬಶೀರ್ @ ಅರ್ಗ ಬಶೀರ್ ಎಂಬಾತನ ವಿರುದ್ಧ ಈ ಹಿಂದೆ ಬಜಪೆ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ, ಮೂಡಬಿದ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೂಡಾ ಪ್ರಕರಣವೊಂದು ದಾಖಲಾಗಿರುತ್ತದೆ.

ಸಿಸಿಬಿ ಘಟಕದ ಇನ್ಸ್ ಪೆಕ್ಟರ್ ಸುನೀಲ್ ವೈ ನಾಯ್ಕ್ ಮತ್ತು ಪಿ.ಎಸ್.ಐ ಶ್ಯಾಮ್ ಸುಂದರ್ ಹಾಗೂ ಸಿಬ್ಬಂದಿಗಳು ಪತ್ತೆಕಾರ್ಯದಲ್ಲಿ ಭಾಗವಹಿಸಿದ್ದರು.


Spread the love