ಕೊಲ್ಲೂರು ದೇವಸ್ಥಾನಕ್ಕೆ ಭೇಟಿ ನೀಡಿದ ಜೂ. ಎನ್ ಟಿ ಆರ್ ಕುಟುಂಬ

Spread the love

ಕೊಲ್ಲೂರು ದೇವಸ್ಥಾನಕ್ಕೆ ಭೇಟಿ ನೀಡಿದ ಜೂ. ಎನ್ ಟಿ ಆರ್ ಕುಟುಂಬ

ಕುಂದಾಪುರ: ತೆಲುಗಿನ ಸ್ಟಾರ್ ನಟ ಜೂ ಎನ್ಟಿಆರ್ ಅವರ ಟೆಂಪಲ್ ರನ್ ಮುಂದುವರೆದಿದ್ದು, ಭಾನುವಾರ ಕೊಲ್ಲೂರು ಮೂಕಾಂಬಿಕೆ ದೇವಸ್ಥಾನಕ್ಕೆ ಭೇಟಿ ನೀಡಿದ್ದರು.

ಉಡುಪಿ ಜಿಲ್ಲೆಯ ಬೈಂದೂರಿನ ಕೊಲ್ಲೂರು ದೇಗುಲದಲ್ಲಿ ನಟ, ನಿರ್ದೇಶಕ ರಿಷಬ್ ಶೆಟ್ಟಿ, ಕೆಜಿಎಫ್ ಖ್ಯಾತಿಯ ಡೈರೆಕ್ಟರ್ ಪ್ರಶಾಂತ್ ನೀಲ್ ಕುಟುಂಬವೂ ಜೊತೆಯಾಯಿತು. ಲಾಫಿಂಗ್ ಬುದ್ಧ ನಟ ಪ್ರಮೋದ್ ಶೆಟ್ಟಿ ಸಹ ಜೊತೆಗೆ ಬಂದು ದೇವರ ದರ್ಶನ ಮಾಡಿದರು. ನಾಲ್ಕು ಕುಟುಂಬಗಳು ಕೊಲ್ಲೂರಿನಲ್ಲಿ ಜೊತೆಯಾಗಿ ಬಂದು ದರ್ಶನ ಪಡೆದು ಪ್ರಸಾದ ಸ್ವೀಕಾರ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ತಾರಕ್ ರಾಮ್, ಕೊಲ್ಲೂರು ದೇವಿಯ ದರ್ಶನ ತುಂಬಾ ಚೆನ್ನಾಗಿ ಆಯಿತು. ದರ್ಶನ ಮಾಡಿಸಿದ್ದಕ್ಕೆ ರಿಷಬ್ಗೆ ತುಂಬಾ ಧನ್ಯವಾದ. ಮುಂದಿನ ಸಿನಿಮಾ ದೇವರಾ ಬಗ್ಗೆ ದೇವಸ್ಥಾನದಲ್ಲಿ ನಾನು ಏನು ಮಾತನಾಡುವುದಿಲ್ಲ. ದೇಗುಲ ಭೇಟಿ ಬಿಟ್ಟು ದೇವಸ್ಥಾನದಲ್ಲಿ ಬೇರೇನೂ ವಿಚಾರ ಮಾತನಾಡಲು ನಾನು ಬಯಸುವುದಿಲ್ಲ ಎಂದರು.

ರಿಷಬ್ ಜೊತೆ ಗೆಳೆತನ ಓಡಾಟ ಮಾಡುತ್ತಿರೋದರಿಂದ ಕಾಂತಾರ ಫ್ರೀಕ್ವೆಲ್ನಲ್ಲಿ ತಾರಕ್ ನಟಿಸುತ್ತಾರಾ ಎಂಬ ಪ್ರಶ್ನೆ ಓಡಾಡುತ್ತಿದೆ. ಇದಕ್ಕೆ ಉತ್ತರಿಸಿದ ಅವರು, ರಿಷಬ್ ಶೆಟ್ಟಿ ಅವರೇ ಈ ಬಗ್ಗೆ ಪ್ಲಾನ್ ಮಾಡಬೇಕು. ಅವರು ಏನು ಪ್ಲಾನ್ ಮಾಡಿದರೂ ನಾನು ರೆಡಿ ಎಂದರು. ದೇವಸ್ಥಾನದಲ್ಲಿ ಆ ವಿಚಾರ ನಾನು ಮಾತನಾಡುವುದಿಲ್ಲ. ಪ್ರಮೋದ್ ಶೆಟ್ಟಿ ನಟನೆಯ ಲಾಫಿಂಗ್ ಬುದ್ಧ ಸಿನಿಮಾ ನೋಡುತ್ತೇನೆ. ಲಾಫಿಂಗ್ ಬುದ್ಧ ಯಶಸ್ಸಿಗೆ ಪ್ರಮೋದ್ ಶೆಟ್ಟಿಗೆ ರಿಷಬ್ ಅಭಿನಂದಿಸಿದರು.


Spread the love
Subscribe
Notify of

0 Comments
Inline Feedbacks
View all comments