ಕೊಳಚೆ ನಿರ್ಮೂಲನೆ ಮಂಡಳಿಯ ಅನುದಾನದಿಂದ ನೀತಿನಗರದಲ್ಲಿ ವಿವಿಧ ಕಾಮಗಾರಿಗಳ ಗುದ್ದಲಿಪೂಜೆ

Spread the love

ಕೊಳಚೆ ನಿರ್ಮೂಲನೆ ಮಂಡಳಿಯ ಅನುದಾನದಿಂದ ನೀತಿನಗರದಲ್ಲಿ ವಿವಿಧ ಕಾಮಗಾರಿಗಳ ಗುದ್ದಲಿಪೂಜೆ

ಮಂಗಳೂರು : ಕರ್ನಾಟಕ ಕೊಳಚೆ ನಿರ್ಮೂಲನೆ ಮಂಡಳಿಯ ಅನುದಾನದಲ್ಲಿ ಮಂಗಳೂರು ಶಕ್ತಿನಗರದ ಬಳಿಯಿರುವ ನೀತಿನಗರದಲ್ಲಿ ವಿವಿಧ ಕಾಮಗಾರಿಗಳ ಗುದ್ದಲಿಪೂಜೆಯನ್ನು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಜೆ.ಆರ್ ಲೋಬೊರವರು ನೆರವೇರಿಸಿದರು.

ಈ ಸಂದರ್ಭದಲ್ಲಿ ಅವರು ಮಾತನಾಡುತ್ತಾ, ಸುಮಾರು ರೂ.40 ಲಕ್ಷದ ವೆಚ್ಚದಲ್ಲಿ ಈ ಪ್ರದೇಶದ ರಸ್ತೆ, ತೋಡು ಹಾಗೂ ತಡೆಗೋಡೆಯನ್ನು ನಿರ್ಮಿಸಲಾಗುವುದು. ಈ ಹಿಂದೆಯೇ ಕೂಡ ಮಂಡಳಿಯ ನೆರವಿನಿಂದ ಕಾಮಗಾರಿಯನ್ನು ಕೈಗೊಳ್ಳಲಾಗಿತ್ತು. ಈ ಎಲ್ಲಾ ಕಾಮಗಾರಿಗಳಿಂದ ಈ ಪ್ರದೇಶದಲ್ಲಿ ವಾಸಿಸುತ್ತಿರುವ ಜನರಿಗೆ ಬಹಳಷ್ಟು ಪ್ರಯೋಜನವಾಗಲಿದೆ ಎಂದರು.

ಈ ಸಂದರ್ಭದಲ್ಲಿ ಕಾರ್ಪೊರೇಟರ್ ಜುಬೈದಾ, ಮಾಜಿ ಮೇಯರ್ ಅಬ್ದುಲ್ ಅಜೀಜ್, ವಾರ್ಡ್ ಅಧ್ಯಕ್ಷ ಕುಮಾರ್, ಆಲ್ವಿನ್ ಪಾಯಿಸ್ ಉಪಸ್ಥಿತರಿದ್ದರು.


Spread the love