ಕೋಟ : ಹೋಂ ಕ್ವಾರಂಟೈನ್ ನಿಂದ ಮನನೊಂದು ಬಾಲಕ ಆತ್ಮಹತ್ಯೆಗೆ ಶರಣು

Spread the love

ಕೋಟ : ಹೋಂ ಕ್ವಾರಂಟೈನ್ ನಿಂದ ಮನನೊಂದು ಬಾಲಕ ಆತ್ಮಹತ್ಯೆಗೆ ಶರಣು

ಉಡುಪಿ: ಹೋಮ್ ಕ್ವಾರಂಟೈನ್ ನಲ್ಲಿದ್ದ 15 ವರ್ಷದ ಬಾಲಕನೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೋಟ ಪೊಲೀಸ್ ಠಾಣಾ ವ್ಯಾಪ್ತಿಯ ಗುಂಡ್ಮಿ ಮಣಿಕಟ್ಟು ಎಂಬಲ್ಲಿ ಜುಲೈ 6 ರಂದು ರಾತ್ರಿ ಸಂಭವಿಸಿದೆ.
ಮೃತ ಬಾಲಕನನ್ನು ರುದ್ರ ಅವರ ಪುತ್ರ ಕಾರ್ತಿಕ್ (15) ಎಂದು ಗುರುತಿಸಲಾಗಿದೆ.

ಜುಲೈ 5ರಂದು ರುದ್ರ ಅವರು ಕೂಲಿ ಕೆಲಸ ಮಾಡಿಕೊಂಡಿರುವ ಮನೆಯ ಯಜಮಾನ ಚೇಂಪಿ ವೆಂಕಟೇಶ್ ಭಟ್ ಎಂಬವರಿಗೆ ಕೋವಿಡ್ 19 ಪಾಸಿಟಿವ್ ಬಂದಿದ್ದು ರುದ್ರ ಅವರ ಮನೆಯವರೆಲ್ಲರೂ ಹೋಮ್ ಕ್ವಾರಂಟೈನ್ ಇರುವಂತೆ ಕಾರ್ಕಡ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಯವರು ಸೂಚಿಸಿದ್ದು, ಅದರಂತೆ ಮನೆಯವರು ಹೋಮ್ ಕ್ವಾರಂಟೈನ್ ಆಗಿದ್ದು, ಜುಲೈ 6 ರಂದು ಕಾರ್ತಿಕ್ ಮನೆಯಿಂದ ಹೊರಗೆ ಬಿಡುವಂತೆ ತಾಯಿ ರುದ್ರ ಅವರಲ್ಲಿ ಹಠ ಮಾಡಿದ್ದು, ತಾಯಿ ಆತನಿಗೆ ಮನೆಯಿಂದ ಹೊರಗೆ ಹೋಗದಂತೆ ಸೂಚಿಸಿದ್ದು ಇದೇ ಹಠದಿಂದ ಮಧ್ಯಾಹ್ನ ಊಟವನ್ನು ಮಾಡದೆ ಸಿಟ್ಟಿನಲ್ಲಿ ಕಾರ್ತಿಕ್ ಮನೆಯ ಆತನ ಕೋಣೆಯಲ್ಲಿ ಸುಮಾರು 02:30 ಗಂಟೆ ಸುಮಾರಿಗೆ ಹೋಗಿ ಮಲಗಿದ್ದು ಆತನನ್ನು ಮನೆಯಿಂದ ಹೊರಗಡೆ ಹೋಗಲು ಬಿಡಲಿಲ್ಲವೆಂಬ ಕಾರಣದಿಂದ ಜಿಗುಪ್ಸೆಗೊಂಡು ಆತನ ಕೋಣೆಯ ಮರದ ಅಡ್ಡೆಗೆ ಸೀರೆಯಿಂದ ಕಟ್ಟಿ ಕುತ್ತಿಗೆಗೆ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

ಮಗ ನೇಣು ಬಿಗಿದುಕೊಂಡಿರುವುದನ್ನು ಕಂಡು ಕೂಡಲೇ ಸ್ಥಳೀಯರ ಸಹಾಯದಿಂದ ನೇಣಿನ ಕುಣಿಕೆಯನ್ನು ಬಿಚ್ಚಿ ಚಿಕಿತ್ಸೆಗಾಗಿ ಬ್ರಹ್ಮಾವರದ ಖಾಸಗಿ ಆಸ್ಪತ್ರೆಗೆ ಕೊಂಡೊಯ್ದಿದ್ದು, ವೈದ್ಯರು ಪರೀಕ್ಷಿಸಿ ಅದಾಗಲೇ ಆತ ಮೃತಪಟ್ಟಿರುವುದಾಗಿ ಹೇಳಿದ್ದಾರೆ.

ಘಟನೆಯ ಕುರಿತು ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love