ಕೋಮು ವಿರೋಧಿ ಕಾರ್ಯಪಡೆ ಹಿಂದೂ ವಿರೋಧಿ ಕಾರ್ಯಪಡೆಯಾಗಿದೆ – ವೇದವ್ಯಾಸ ಕಾಮತ್

Spread the love

ಕೋಮು ವಿರೋಧಿ ಕಾರ್ಯಪಡೆಯು ಹಿಂದೂ ವಿರೋಧಿ ಕಾರ್ಯಪಡೆಯಾಗಿದೆ ವೇದವ್ಯಾಸ ಕಾಮತ್

ಮಂಗಳೂರು: ದ.ಕ ಜಿಲ್ಲೆಯನ್ನು ಕೇಂದ್ರವಾಗಿರಿಸಿಕೊಂಡು ರಾಜ್ಯ ಕಾಂಗ್ರೆಸ್ ಸರ್ಕಾರ ಮಂಗಳೂರಿನಲ್ಲಿ ಅಸ್ಥಿತ್ವಕ್ಕೆ ತಂದಿರುವ ಕೋಮು ವಿರೋಧಿ ಕಾರ್ಯಪಡೆಯು ಹಿಂದೂ ವಿರೋಧಿ ಕಾರ್ಯಪಡೆಯಾಗಿ ಕಾರ್ಯನಿರ್ವಹಿಸುತ್ತಿರುವಂತೆ ಭಾಸವಾಗುತ್ತಿದೆ ಎಂದು ಶಾಸಕ ವೇದವ್ಯಾಸ ಕಾಮತ್ ರವರು ಅಧಿವೇಶನದಲ್ಲಿ ಪ್ರಸ್ತಾಪಿಸಿದರು.

ಕರಾವಳಿ ಭಾಗದಲ್ಲಿ ಗೋಕಳ್ಳರು ರಾಜಾರೋಷವಾಗಿ ತಲವಾರು ಸಹಿತ ಹಟ್ಟಿಗೆ ನುಗ್ಗಿ ಗೋವುಗಳನ್ನು ಕದ್ದುಕೊಂಡು ಹೋಗಿ ಹತ್ಯೆ ಮಾಡುತ್ತಿದ್ದಾರೆ. ಲವ್ ಜಿಹಾದ್ ಪ್ರಕರಣಗಳು ಹೆಚ್ಚುತ್ತಿವೆ. ಅತೀ ಹೆಚ್ಚು ಶಿಕ್ಷಣ ಸಂಸ್ಥೆಯಿರುವ ಮಂಗಳೂರು, ಕೇರಳದ ಗಡಿಭಾಗವಾದ್ದರಿಂದ ವ್ಯಾಪಕವಾಗಿ ಡ್ರಗ್ಸ್ ಪ್ರಕರಣಗಳು ಕಂಡು ಬರುತ್ತಿವೆ. ಇವುಗಳೇ ಇಲ್ಲಿನ ಗಲಭೆಗಳಿಗೆ ಮೂಲ ಕಾರಣ. ಮೊದಲು ಇವುಗಳಿಗೆಲ್ಲ ಕಡಿವಾಣ ಹಾಕಿ. ಆಗ ಯಾವ ಗಲಭೆಯೂ ಇರುವುದಿಲ್ಲ. ಯಾವ ಹೆಚ್ಚುವರಿ ಪೊಲೀಸ್ ಫೋರ್ಸಿನ ಅಗತ್ಯವೂ ಇರುವುದಿಲ್ಲ.

ಅದು ಬಿಟ್ಟು ಪೊಲೀಸರು, ಯಾವುದೇ ಪ್ರಕರಣವಿಲ್ಲದಿದ್ದರೂ 75-80 ವರ್ಷದ ಹಿರಿಯ ಹಿಂದೂ ಕಾರ್ಯಕರ್ತರ ಮನೆಗೆ ಮಧ್ಯರಾತ್ರಿಯಲ್ಲಿ ನುಗ್ಗಿ ಕಿರುಕುಳ ನೀಡುವುದು, ಐವನ್ ಡಿಸೋಜ ರಂತಹ ಕಾಂಗ್ರೆಸ್ ನಾಯಕರು ಬಹಿರಂಗವಾಗಿಯೇ ರಾಜ್ಯಪಾಲರನ್ನು ಬಾಂಗ್ಲಾ ಮಾದರಿಯಲ್ಲಿ ಓಡಿಸುತ್ತೇವೆ ಎಂದರೂ ಅವರ ಮೇಲೆ ಪ್ರಕರಣ ದಾಖಲಿಸದಿರುವುದು, ನಮ್ಮ ಮೇಲೆ ಸುಳ್ಳು ಪ್ರಕರಣಗಳನ್ನು ದಾಖಲಿಸುವುದು, ಇಂತಹ ತಾರತಮ್ಯ ನಡೆದಾಗ ಸಾರ್ವಜನಿಕರಲ್ಲಿ ಮತ್ತಷ್ಟು ಆಕ್ರೋಶ ಹೆಚ್ಚಾಗುತ್ತದೆ ಎಂದರು.


Spread the love
Subscribe
Notify of

0 Comments
Inline Feedbacks
View all comments