ಕೋವಿಡ್ ಗೆದ್ದು ಬಂದ ಬೋಳೂರಿನ ಅಜ್ಜ ಮತ್ತು ಮೊಮ್ಮಗಳಿಗೆ ಊರಿನ ಜನರಿಂದ ಪ್ರೀತಿಯ ಸ್ವಾಗತ

Spread the love

ಕೋವಿಡ್ ಗೆದ್ದು ಬಂದ ಬೋಳೂರಿನ ಅಜ್ಜ ಮತ್ತು ಮೊಮ್ಮಗಳಿಗೆ ಊರಿನ ಜನರಿಂದ ಪ್ರೀತಿಯ ಸ್ವಾಗತ

ಮಂಗಳೂರು: ಕೊರೋನಾ ಸೋಂಕಿಗೆ ತುತ್ತಾಗಿ ಆಸ್ಪತ್ರೆ ಸೇರಿದ್ದ ಬೋಳೂರಿನ ಅಜ್ಜ ಹಾಗೂ ಆತನ ಮೊಮ್ಮಗಳು ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಬಿಡುಗಡೆ ಹೊಂದಿ ವಾಪಾಸು ಮನೆಗೆ ತೆರಳಿದಾಗ ನೆರೆಮನೆಯವರು ಹಾಗೂ ಗ್ರಾಮಸ್ಥರು ಬುಧವಾರ ಅಭೂತಪೂರ್ವ ಸ್ವಾಗತ ನೀಡಿದರು.

ಊರಿನ ಕಾರ್ಪೋರೆಟರ್ ಜಗದೀಶ್ ಶೆಟ್ಟಿ ಹಾಗೂ ಊರಿನವರು ಗುಣಮುಖರಾಗಿ ಬಂದ ಅಜ್ಜ ಮತ್ತು ಮೊಮ್ಮಗಳನ್ನು ಪ್ರೀತಿಪೂರ್ವಕವಾಗಿ ಚಪ್ಪಾಳೆ ನೀಡುವುದರ ಮೂಲಕ ಸ್ವಾಗತ ಕೋರಿದರು. ಕೋರೊನಾ ಸೋಂಕು ದೃಢಗೊಂಡ ಬಳಿಕ ಬೋಳೂರು ಪ್ರದೇಶವನ್ನು ಸೀಲ್ ಡೌನ್ ಮಾಡಲಾಗಿತ್ತು ಇಂದು ಇಬ್ಬರೂ ಕೂಡ ಗುಣಮುಖರಾಗಿ ಬಂದ ದೃಶ್ಯವನ್ನು ಗ್ರಾಮಸ್ಥರು ಸಂತೋಷದಿಂದ ಸ್ವಾಗತ ಕೋರಿದ್ದರು.

ಗ್ರಾಮಸ್ಥರ ಪ್ರೀತಿ ಮತ್ತು ಹಾರೈಕೆಯನ್ನು ಕಂಡ ಅಜ್ಜ ಮತ್ತು ಮೊಮ್ಮಗಳು ಇಬ್ಬರೂ ಕೂಡ ಆನಂದ ಬಾಷ್ಪವನ್ನು ಸುರಿಸಿದರು. ಅಲ್ಲದೆ ತಮ್ಮ ಮೇಲೆ ತೋರಿದ ಪ್ರೀತಿಗೆ ಕೃತಜ್ಞತೆಯನ್ನು ಸಲ್ಲಿಸಿದರು.


Spread the love