ಕೋವಿಡ್ ನಿಂದ ಮೈಸೂರಿನ ಯುವ ಪತ್ರಕರ್ತ ಪವನ್ ಹೆತ್ತೂರು ನಿಧನ

Spread the love

ಕೋವಿಡ್ ನಿಂದ ಮೈಸೂರಿನ ಯುವ ಪತ್ರಕರ್ತ ಪವನ್ ಹೆತ್ತೂರು ನಿಧನ

ಮೈಸೂರು: ಹೆಸರಾಂತ ಕನ್ನಡ ದೈನಿಕ ಪ್ರಜಾವಾಣಿಯ ಮೈಸೂರು ವರದಿಗಾರ ಪವನ್ ಹೆತ್ತೂರು ಅವರು ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ. ಅವರಿಗೆ 35 ವರ್ಷ ವಯಸ್ಸಾಗಿತ್ತು.

ಉತ್ಸಾಹಿ ಪತ್ರಕರ್ತರಾಗಿದ್ದ ಪವನ್ ಹೆತ್ತೂರು ಪ್ರಜಾವಾಣಿ ಸೇರಿದಂತೆ ವಿಜಯವಾಣಿ, ಕಸ್ತೂರಿ ಟಿವಿಯಲ್ಲಿ ಕೆಲಸ ಮಾಡಿದ್ದರು. ಪ್ರಸ್ತುತ ಮೈಸೂರು ಪ್ರಜಾವಾಣಿ ಬ್ಯೂರೋದಲ್ಲಿ ಕೆಲಸ ಮಾಡುತ್ತಿದ್ದು ಕೋವಿಡ್ ಸೋಂಕು ದೃಢಗೊಂಡ ಹಿನ್ನಲೆಯಲ್ಲಿ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು ಭಾನುವಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಮೃತ ಪವನ್ ಪತ್ನಿ, ಇಬ್ಬರು ಚಿಕ್ಕ ಮಕ್ಕಳನ್ನು ಅಗಲಿದ್ದು , ಮೃತರ ಅಂತ್ಯಕ್ರಿಯೆ ಹಾಸನ ಜಿಲ್ಲೆ ಸಕಲೇಶಪುರದ ತಾಲೂಕಿನ ಹೆತ್ತೂರಿನಲ್ಲಿ ನಡೆಯಲಿದೆ.


Spread the love