ಕೋವಿಡ್-19 : ತ್ರಾಸಿ ಗ್ರಾಪಂ ವ್ಯಾಪ್ತಿಯ ಆಶಾ ಕಾರ್ಯಕರ್ತೆಯರು, ಎ ಎನ್ ಎಮ್ ಸಿಬಂದಿಗಳಿಗೆ ಸನ್ಮಾನ

Spread the love

ಕೋವಿಡ್-19 : ತ್ರಾಸಿ ಗ್ರಾಪಂ ವ್ಯಾಪ್ತಿಯ ಆಶಾ ಕಾರ್ಯಕರ್ತೆಯರು, ಎ ಎನ್ ಎಮ್ ಸಿಬಂದಿಗಳಿಗೆ ಸನ್ಮಾನ

ಕುಂದಾಪುರ: ಕಳೆದ ಒಂದು ತಿಂಗಳಿನಿಂದ ಲಾಕ್ಡೌನ್ ಹಿನ್ನೆಲೆಯಲ್ಲಿ ಕೋವಿಡ್-19 ಕೊರೊನಾ ವೈರಸ್ ವಿರುದ್ಧ ಹೋರಾಟದಲ್ಲಿ ಸಮಗ್ರವಾಗಿ ತೊಡಗಿಸಿಕೊಂಡಿರುವ ತ್ರಾಸಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಆಶಾ ಕಾರ್ಯಕರ್ತೆಯರು ಹಾಗೂ ಎಎನ್ಎಂ ಸಿಬ್ಬಂದಿಗಳನ್ನು ತ್ರಾಸಿ ಗ್ರಾಮಸ್ಥರು ಶುಕ್ರವಾರ ಸನ್ಮಾನಿಸಿ ಗೌರವಿಸಿದ್ದಾರೆ.

ತ್ರಾಸಿ ಗ್ರಾಮ ಪಂಚಾಯತ್ ಕಾರ್ಯಾಲಯದಲ್ಲಿ ನಡೆದ ಸರಳ ಸಮಾರಂಭದಲ್ಲಿ ತ್ರಾಸಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಆಶಾ ಕಾರ್ಯಕರ್ತೆಯರು ಹಾಗೂ ಎಎನ್ಎಂ ಸಿಬ್ಬಂದಿಗಳನ್ನು ತ್ರಾಸಿ ಗ್ರಾಮಸ್ಥರ ಪರವಾಗಿ ಗ್ರಾಮ ಪಂಚಾಯತ್ ಅಧ್ಯಕ್ಷ ಸುಧಾಕರ ಆಚಾರ್ಯ ಸನ್ಮಾನಿಸಿ ಗೌರವಿಸಿದರು.

ತ್ರಾಸಿ ಗ್ರಾಪಂ ಸದಸ್ಯ ರವೀಂದ್ರ ಖಾರ್ವಿ, ಸ್ಥಳೀಯರಾದ ಮಿಥುನ್ ಎಂ.ಡಿ. ಬಿಜೂರು, ರಾಘವೇಂದ್ರ ದೇವಾಡಿಗ, ಪಾಂಡುರಂಗ ದೇವಾಡಿಗ, ಅಂತೋನಿ ಡಿಸೋಜ, ಅಕ್ಷಯ ದೇವಾಡಿಗ, ಅಭಿಮನ್ಯು ಅವಭೃತ, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶೋಭಾ, ಲೆಕ್ಕ ಸಹಾಯಕ ಶಿವಾನಂದ ಎಂ., ಗ್ರಾಪಂ ಸಿಬ್ಬಂದಿಗಳು ಮತ್ತಿತರರು ಉಪಸ್ಥಿತರಿದ್ದರು.


Spread the love