ಕೋವಿಡ್-19: ಮುಖ್ಯಮಂತ್ರಿ ಬಿಎಸ್.ವೈ ಸಂಪರ್ಕಕ್ಕೆ ಬಂದ ಸಚಿವ ಕೋಟ ಹೋಂ ಕ್ವಾರಂಟೈನ್

Spread the love

ಕೋವಿಡ್-19: ಮುಖ್ಯಮಂತ್ರಿ ಬಿಎಸ್.ವೈ ಸಂಪರ್ಕಕ್ಕೆ ಬಂದ ಸಚಿವ ಕೋಟ ಹೋಂ ಕ್ವಾರಂಟೈನ್

ಉಡುಪಿ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿರುವುದರಿಂದ ಅವರ ಸಂಪರ್ಕಕ್ಕೆ ಬಂದಿರುವ ದಕ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ತಮ್ಮ ಸ್ವಗೃಹದಲ್ಲಿ ಕ್ವಾರಂಟೈನ್ ಆಗಿದ್ದಾರೆ.

ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಜುಲೈ 30ರಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರನ್ನು ಭೇಟಿಯಾಗಿದ್ದು, ಭಾನುವಾರ ಮುಖ್ಯಮಂತ್ರಿಯವರಿಗೆ ಪಾಸಿಟಿವ್ ದೃಢಪಟ್ಟಿರುವುದರಿಂದ ಪೂಜಾರಿಯವರು ತನ್ನ ಕೋಟದಲ್ಲಿರುವ ಮನೆಯಲ್ಲಿ ಕ್ವಾರಂಟೈನ್ ಆಗಿದ್ದಾರೆ.

ಐದು ದಿನಗಳಲ್ಲಿ ತನಗೆ ಯಾವುದೇ ರೋಗ ಲಕ್ಷಣಗಳು ಕಂಡು ಬಂದಿಲ್ಲ ಆದರೂ ಮುಂಜಾಗೃತಾ ದೃಷ್ಟಿಯಿಂದ ಕ್ವಾರಂಟೈನ್ ಆಗಿದ್ದೇನೆ. ಮಂಗಳವಾರ ಕೋವಿಡ್ -19 ಪರೀಕ್ಷೇ ಮಾಡಿಕೊಳ್ಳಲಿದ್ದು ವರದಿ ನೆಗೆಟಿವ್ ಬಂದರೆ ಕೆಲಸ ಕಾರ್ಯ ಮುಂದುವರೆಸುತ್ತೇನೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾಹಿತಿ ನೀಡಿದ್ದಾರೆ.


Spread the love