ಕೋವಿಡ್ -2019; ಮಾ. 19ರಂದು ಅತ್ತೂರು ಬಾಸಿಲಿಕಾದಲ್ಲಿ ನೊವೆನಾ, ಬಲಿಪೂಜೆ ರದ್ದು

ಕೋವಿಡ್ -2019; ಮಾ. 19ರಂದು ಅತ್ತೂರು ಬಾಸಿಲಿಕಾದಲ್ಲಿ ನೊವೆನಾ, ಬಲಿಪೂಜೆ ರದ್ದು

ಕಾರ್ಕಳ : ಕೊರೋನಾ ವೈರಸ್ ರೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ಉಡುಪಿ ಜಿಲ್ಲಾಧಿಕಾರಿಯವರು ಮುನ್ನೆಚ್ಚರಿಕಾ ಕ್ರಮವಾಗಿ 144(3)  ನಿಷೇಧಾಜ್ಷೆ ಜಾರಿಗೆಗೊಳಿಸಿರುವ ಹಿನ್ನಲೆಯಲ್ಲಿ ಪ್ರಸಿದ್ದ ಕಾರ್ಕಳ ಅತ್ತೂರು ಸಂತ ಲಾರೆನ್ಸ್ ಬಾಸಿಲಿಕಾದಲ್ಲಿ 2020 ಮಾರ್ಚ್ 19 ರಂದು ಪ್ರತಿ ವಾರದದಂತೆ ಗುರುವಾರ ನಡೆಯುವ ನೊವೆನಾ ಪ್ರಾರ್ಥನಾ ವಿಧಿಗಳನ್ನು ರದ್ದುಗೊಳಿಸಲಾಗಿದೆ ಎಂದು ಬಾಸಿಲಿಕಾದ ಧರ್ಮಗುರುಗಳು ತಿಳಿಸಿದ್ದಾರೆ.

ಈ ಕುರಿತು ಮಾಧ್ಯಮ ಹೇಳಿಕೆ ನೀಡಿರುವ ಅವರು ಕೊರೊನಾ ವೈರಸ್ ರೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ಉಡುಪಿ ಜಿಲ್ಲಾಧಿಕಾರಿಯವರು ಮುನ್ನೆಚ್ಚರಿಕಾ ಕ್ರಮವಾಗಿ ನಿಷೇಧಾಜ್ಞೆ ಜಾರಿಗೆಗೊಳಿಸಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನಸೇರುವುದನ್ನು ತಡೆಗಟ್ಟಲು ಉಡುಪಿ ಜಿಲ್ಲಾಧಿಕಾರಿಯವರು ಈ ಆದೇಶ ನೀಡಿದ್ದಾರೆ. ಆದ್ದರಿಂದ ಮಾರ್ಚ್ 19, 2020 ಗುರುವಾರದಂದು ಸಂತ ಲಾರೆನ್ಸರ್ ಬಸಿಲಿಕಾ, ಕಾರ್ಕಳ ಇಲ್ಲಿ ಪ್ರತಿ ಗುರುವಾರ ನಡೆಯುವ ಬಲಿಪೂಜೆ ಹಾಗೂ ನೊವೆನಾ ಪ್ರಾರ್ಥನಾ ವಿಧಿಗಳು ರದ್ದುಗೊಳಿಸಲಾಗಿದ್ದು ಭಕ್ತಾದಿಗಳು ಸಹಕರಿಸುವಂತೆ ಬಸಿಲಿಕಾದ ಧರ್ಮಗುರು ವಂ|ಜೋರ್ಜ್ ಡಿಸೋಜಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

  Subscribe  
Notify of