ಕ್ಲೋಸ್ ಡೌನ್ ಆಗಿದ್ದ ತೆಂಕನಿಡಿಯೂರು ಪೊಲೀಸ್ ಕ್ವಾರ್ಟರ್ಸ್ ಪರಿಸರದವರಿಗೆ ಪ್ರಖ್ಯಾತ್ ಶೆಟ್ಟಿ ನೇತೃತ್ವದಲ್ಲಿ ಆಹಾರ ಕಿಟ್ ವಿತರಣೆ

Spread the love

ಕ್ಲೋಸ್ ಡೌನ್ ಆಗಿದ್ದ ತೆಂಕನಿಡಿಯೂರು ಪೊಲೀಸ್ ಕ್ವಾರ್ಟರ್ಸ್ ಪರಿಸರದವರಿಗೆ ಪ್ರಖ್ಯಾತ್ ಶೆಟ್ಟಿ ನೇತೃತ್ವದಲ್ಲಿ ಆಹಾರ ಕಿಟ್ ವಿತರಣೆ

ಉಡುಪಿ: ತೆಂಕನಿಡಿಯೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಾಸವಿದ್ದ ಒರ್ವ ಪೊಲೀಸ್ ಅಧಿಕಾರಿಗೆ ಕೊರೋನಾ ಪಾಸಿಟಿವ್ ಬಂದ ಹಿನ್ನಲೆಯಲ್ಲಿ ಪೊಲೀಸ್ ಕ್ವಾರ್ಟರ್ಸ್ ಕ್ಲೋಸ್ ಡೌನ್ ಮಾಡಿದ ಹಿನ್ನಲೆಯಲ್ಲಿ ಸಮಸ್ಯೆಗೊಳಗಾದ ಅಲ್ಲಿನ ಕುಟುಂಬಗಳಿಗೆ ಉಡುಪಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಹಾಗೂ ತೆಂಕನಿಡಿಯೂರು ಗ್ರಾಮ ಪಂಚಾಯತಿನ ಮಾಜಿ ಉಪಾಧ್ಯಕ್ಷರಾಗಿರುವ ಪ್ರಖ್ಯಾತ್ ಶೆಟ್ಟಿ ಇವರ ಪ್ರಾಯೋಜಕತ್ವದಲ್ಲಿ ತೆಂಕನಿಡಿಯೂರು ಗ್ರಾಮೀಣ ಕಾಂಗ್ರೆಸ್ ಸಹಕಾರದೊಂದಿಗೆ ದಿನಸಿ ಕಿಟ್ ಗಳನ್ನು ಶನಿವಾರ ಹಸ್ತಾಂತರಿಸಲಾಯಿತು.

ಈ ವೇಳೆ ಮಾತನಾಡಿದ ಪ್ರಖ್ಯಾತ್ ಶೆಟ್ಟಿ ಪೊಲೀ್ಸ್ ಕ್ವಾರ್ಟರ್ಸ್ ಕ್ಲೋಸ್ ಡೌನ್ ಆಗಿರುವ ಸಂದರ್ಭದಲ್ಲಿ ಅಲ್ಲಿನ ಕುಟುಂಬಗಳಿಗೆ ಆಹಾರದ ಕಿಟ್ ಗಳನ್ನು ನೀಡಲಾಗಿದ್ದು, ಆರಕ್ಷಕರು ಸಮಾಜವನ್ನು ರಕ್ಷಿಸುವವರು ಈ ಸಂದೀಗ್ದ ಪರಿಸ್ಥಿತಿಯಲ್ಲಿ ಅವರ ಜೊತೆ ನಿಂತು ಸಹಕರಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು.

ಈ ವೇಳೆ ನಾಯಕರಾದ ಗೋಪಾಲಕೃಷ್ಣ ಶೆಟ್ಟಿ, ಯತೀಶ್ ಕರ್ಕೇರಾ, ಸತೀಶ್ ಶೆಟ್ಟಿ, ಅವಿನಾಶ್ ಹಾಗೂ ಮಲ್ಪೆ ಪೊಲಿಸ್ ಠಾಣೆಯ ಪ್ರಭಾರ ಎಸ್ ಫೆಮಿನಾ ಕೂಡ ಉಪಸ್ಥಿತರಿದ್ದರು.


Spread the love