ಗಂಗೊಳ್ಳಿ: ಬೈಕಿಗೆ ಲಾರಿ ಡಿಕ್ಕಿ – ಯುವ ಬ್ಯಾಂಕ್ ಮ್ಯಾನೇಜರ್ ಮೃತ್ಯು

Spread the love

ಗಂಗೊಳ್ಳಿ: ಬೈಕಿಗೆ ಲಾರಿ ಡಿಕ್ಕಿ – ಯುವ ಬ್ಯಾಂಕ್ ಮ್ಯಾನೇಜರ್ ಮೃತ್ಯು

ಕುಂದಾಪುರ: ಲಾರಿಯೊಂದು ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಯುವ ಬ್ಯಾಂಕ್ ಮ್ಯಾನೇಜರ್ ಮೃತಪಟ್ಟ ಘಟನೆ ರಾಹೆ 66 ರ ಆರಾಟೆ ಬಳಿ ಶನಿವಾರ ಸಂಜೆ ನಡೆದಿದೆ.

ಮೃತರನ್ನು ರಾಹುಲ್ ಬಾಲಕ್ರಷ್ಣ ರಣಕಂಬೆ ಎಂದು ಗುರುತಿಸಲಾಗಿದೆ. ಮೂಲತಃ ಮಹಾರಾಷ್ಟ್ರದವರಾದ ರಾಹುಲ್ ಮರವಂತೆ ಕೆನರಾ ಬ್ಯಾಂಕ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.

ಶನಿವಾರ ಸಂಜೆ ಬ್ಯಾಂಕಿನ ಕರ್ತವ್ಯ ಮುಗಿಸಿ ತನ್ನ ಬೈಕಿನಲ್ಲಿ ಕುಂದಾಪುರದ ಮನೆಗೆ ತೆರಳುತ್ತಿದ್ದ ವೇಳೆ ಆರಾಟೆ ಬಸ್ ನಿಲ್ದಾಣದ ಬಳಿ ಬೈಕಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ರಸ್ತೆಗೆ ಬಿದ್ದ ಪರಿಣಾಮ ರಾಹುಲ್ ಅವರು ತೀವ್ರ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ವೇಳೆ ದಾರಿ ಮಧ್ಯೆ ಮೃತಪಟ್ಟಿರುತ್ತಾರೆ.

ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love