ಗಣಪತಿ ಹೈಸ್ಕೂಲ್ ರಸ್ತೆಯಲ್ಲಿ ಒಳಚರಂಡಿ ಕಾಮಗಾರಿ : ವಾಹನ ಸಂಚಾರದಲ್ಲಿ ಮಾರ್ಪಾಡು

Spread the love

ಗಣಪತಿ ಹೈಸ್ಕೂಲ್ ರಸ್ತೆಯಲ್ಲಿ ಒಳಚರಂಡಿ ಕಾಮಗಾರಿ : ವಾಹನ ಸಂಚಾರದಲ್ಲಿ ಮಾರ್ಪಾಡು

ಮಂಗಳೂರು: ಮಹಾನಗರಪಾಲಿಕೆ ವ್ಯಾಪ್ತಿಯ ಗಣಪತಿ ಹೈಸ್ಕೂಲ್ ರಸ್ತೆಯಲ್ಲಿ ಒಳಚರಂಡಿ ಕಾಮಗಾರಿಯನ್ನು ನಡೆಸುವ ಸಮಯ ರಸ್ತೆಯಲ್ಲಿ ಸಂಪೂರ್ಣ ವಾಹನಗಳ ಸಂಚಾರ ಸ್ಥಗಿತಗೊಳಿಸಿ ಸುಗಮ ಸಂಚಾರದ ದೃಷ್ಠಿಯಿಂದ ವಾಹನಗಳ ಸಂಚಾರದಲ್ಲಿ ಮಾರ್ಪಾಡು ಮಾಡಿ ನಗರ ಪೊಲೀಸ್ ಟಿ.ಆರ್. ಸುರೇಶ್ ಆದೇಶ ಹೊರಡಿಸಿದ್ದಾರೆ.

ಕೆ.ಬಿ ಕಟ್ಟೆ ಜಂಕ್ಷನ್‍ನಿಂದ ಹೋಟೆಲ್ ಸ್ಯಾಪ್ರಾನ್‍ವರೆಗೆ ಒಳಚರಂಡಿ ಕಾಮಗಾರಿಯ ಸಮಯದಲ್ಲಿ ಎಲ್ಲಾ ತರಹದ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಕೆ.ಬಿ. ಕಟ್ಟೆ ಜಂಕ್ಷನ್ ನಿಂದ ಗಣಪತಿ ಹೈಸ್ಕೂಲ್‍ವರೆಗೆ ಒಳಚರಂಡಿ ಕಾಮಗಾರಿಯ ಸಮಯದಲ್ಲಿ ಕೆ.ಬಿ. ಕಟ್ಟೆಯಿಂದ ಗಣಪತಿ ಹೈಸ್ಕೂಲ್ ಮಾರ್ಗವಾಗಿ ಸಂಚರಿಸುವ ಲಘು ವಾಹನಗಳು ಕೆ.ಬಿ ಕಟ್ಟೆಯಿಂದ ಹಂಪನಕಟ್ಟೆ ಮೂಲಕ ಕೆ.ಎಸ್. ರಾವ್ ರಸ್ತೆಯಾಗಿ ಸಂಚರಿಸುವುದು.

ಸ್ಟೇಟ್‍ಬ್ಯಾಂಕ್ ಕಡೆಯಿಂದ ಕೆ.ಬಿ. ಕಟ್ಟೆ ಮುಖಾಂತರ ಗಣಪತಿ ಹೈಸ್ಕೂಲ್ ರಸ್ತೆಯಾಗಿ ಸಾಗುವ ಘನ ವಾಹನಗಳು ಬೆಳಿಗ್ಗೆ 10 ಗಂಟೆಯ ನಂತರ ಸ್ಟೇಟ್‍ಬ್ಯಾಂಕ್‍ನಿಂದ ಹೊರಟು ಲೇಡಿಗೋಶನ್ ರಸ್ತೆಯಾಗಿ ಸೆಂಟ್ರಲ್ ಮಾರ್ಕೆಟ್ ಮುಖಾಂತರ ಭವಂತಿ ಸ್ಟ್ರೀಟ್ ರಸ್ತೆಯಲ್ಲಿ ಅಥವಾ ಸ್ಟೇಟ್ ಬ್ಯಾಂಕ್‍ನಿಂದ ಕೆ.ಎಸ್.ಆರ್ ರಸ್ತೆಯಾಗಿ ಡೊಂಗರಕೇರಿ ಮುಖಾಂತರ ಅಳಕೆ ಜಂಕ್ಷನ್ ಮೂಲಕ ಸಂಚರಿಸಬೇಕಾಗಿದೆ. ಮತ್ತು ಬಾಲಾಜಿ ಜಂಕ್ಷನ್‍ನಿಂದ ಗಣಪತಿ ಹೈಸ್ಕೂಲ್ ರಸ್ತೆಯಾಗಿ ಸ್ಟೇಟ್ ಬ್ಯಾಂಕ್ ಕಡೆಗೆ ಸಂಚರಿಸುವ ಘನ ವಾಹನಗಳು ಬಾಲಾಜಿ ಜಂಕ್ಷನ್‍ನಿಂದ ಅಜೀಜುದ್ದೀನ್ ರಸ್ತೆಯಾಗಿ ಸ್ಟೇಟ್ ಬ್ಯಾಂಕ್ ಕಡೆಗೆ ಸಂಚರಿಸುವುದು.

ಬಾಲಾಜಿ ಜಂಕ್ಷನ್‍ನಿಂದ ಗಣಪತಿ ಹೈಸ್ಕೂಲ್ ರಸ್ತೆಯಾಗಿ ಸ್ಟೇಟ್‍ಬ್ಯಾಂಕ್ ಕಡೆಗಡ ಸಂಚರಿಸುವ ಲಘು ವಾಹನಗಳು ಕಾರ್‍ಸ್ಟ್ರೀಟ್ ಕಡೆಯಿಂದ ಓಮ್ ಮಹಲ್ ಜಂಕ್ಷನ್ ಆಗಿ ಸೆಂಟ್ರಲ್ ಮಾರ್ಕೇಟ್ ಕಡೆಯಿಂದ ಸಂಚರಿಸುವುದು.

ಕೆ.ಬಿ. ಕಟ್ಟೆ ಜಂಕ್ಷನ್‍ನಿಂದ ಗಣಪತಿ ಹೈಸ್ಕೂಲ್‍ವರೆಗೆ ಒಳಚರಂಡಿ ಕಾಮಗಾರಿಯ ಸಮಯದಲ್ಲಿ ಕೆ.ಎಸ್.ಆರ್. ಕಡೆಯಿಂದ ಕೆ.ಬಿ. ಕಟ್ಟೆ ಕಡೆಗೆ ಸಾಗುವ ವಾಹನಗಳಿಗೆ ಕೆ.ಎಸ್.ರಾವ್. ಕಡೆಯಿಂದ ಶರವು ದೇವಸ್ಥಾನ ರಸ್ತೆಯ ಪ್ರವೇಶಕ್ಕೆ ನಿರ್ಬಂಧಿಸಿ ಕೆ.ಎಸ್.ರಾವ್ ರಸ್ತೆಯಿಂದ ಹಂಪನಕಟ್ಟೆ ಕಡೆಗೆ ಚಲಿಸಿ ಕೆ.ಬಿ. ಕಟ್ಟೆ ಮಾರ್ಗವಾಗಿ ಸಂಚರಿಸಬೇಕು.


Spread the love