ಗಾಂಜಾ ಬೇಟೆ: ಎಸಿಪಿ ನೇತೃತ್ವದ ಮಾದಕವಿರೋಧಿ ಪೊಲೀಸ್ ತಂಡದಿಂದ ನಾಲ್ವರ ಬಂಧನ

Spread the love

ಗಾಂಜಾ ಬೇಟೆ: ಎಸಿಪಿ ನೇತೃತ್ವದ ಮಾದಕವಿರೋಧಿ ಪೊಲೀಸ್ ತಂಡದಿಂದ ನಾಲ್ವರ ಬಂಧನ

ಕೊಣಾಜೆ: ಅಕ್ರಮವಾಗಿ ಗಾಂಜಾ ಸಾಗಾಟ ಹಾಗೂ ಮಾರಾಟಕ್ಕೆ ಯತ್ನಿಸುತ್ತಿದ್ದ ನಾಲ್ಕು ಮಂದಿಯನ್ನು ಮಂಗಳೂರು ಗ್ರಾಮಾಂತರ, ಕಂಕನಾಡಿ ಹಾಗೂ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಿಂದ ಮಂಗಳೂರು ನಗರ ದಕ್ಷಿಣ ಉಪವಿಭಾಗದ ಎಸಿಪಿ ನೇತೃತ್ವದ ಮಾದಕವಿರೋಧಿ ಪೊಲೀಸ್ ತಂಡ ಕಾರ್ಯಾಚರಣೆ ನಡೆಸಿ ಎನ್ ಡಿಪಿಎಸ್ ಕಾಯಿದೆಯಡಿ ಪ್ರಕರಣ ದಾಖಲಿಸಿಕೊಂಡು ಬಂಧಿಸಿದೆ.

ದೇರಳಕಟ್ಟೆಯ ಬೆಳ್ಮ ಕನಕೂರಿನ ಅಶ್ರಫ್ ಯಾನೆ ಪೊಂಗ (30), ತಿಲಕನಗರದ ಮೊಹಮ್ಮದ್ ಅಲ್ಫಾಝ್ ( 26) ಇಬ್ಬರನ್ನು 115 ಗ್ರಾಂ ಗಾಂಜಾ ಹಾಗೂ ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ. ಮಾ.14 ರಂದು ಇಬ್ಬರು ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ತಿರುವೈಲ್ ಗ್ರಾಮದ ವಾಮಂಜೂರಿನಲ್ಲಿ ಗಾಂಜಾ ಮಾರಾಟ ಮಾಡುತ್ತಿರುವ ಖಚಿತ ಮಾಹಿತಿ ಪಡೆದ ಪೊಲೀಸ್ ತಂಡ ಬಂಧಿಸಿದೆ. ಇಬ್ಬರಿಂದ ಒಟ್ಟು ರೂ. 10,300 ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿ ಅಶ್ರಫ್ ಯಾನೆ ಪೊಂಗ ಎಂಬಾತನ ವಿರುದ್ಧ ಕೊಣಾಜೆ ಪೊಲೀಸ್ ಠಾಣೆಯ ಪ್ರಕರಣಕ್ಕೆ ಸಂಬAಧಿಸಿ ವಾರೆಂಟ್ ಜಾರಿಯಲ್ಲಿದ್ದು, ಸುಮಾರು ಆರು ತಿಂಗಳಿನಿAದ ನ್ಯಾಯಾಲಯದಿಂದ ತಲೆಮರೆಸಿಕೊಂಡಿದ್ದನು.

ಮಾ.17 ರಂದು ಕಾಟಿಪಳ್ಳದ ಉಮ್ಮರ್ ಫಾರುಕ್ ಯಾನೆ ಮಂಗಳ್ ಫಾರೂಕ್ ಯಾನೆ ಕುಂಞÂಮೋನು (68) ಎಂಬವರನ್ನು ನರಿಂಗಾನ ಗ್ರಾಮದ ಬೋಳ ಲವಕುಶ ಕಂಬಳ ಮೈದಾನದಲ್ಲಿ ಆಕ್ಟಿವಾ ಸ್ಕೂಟರ್ ಮೂಲಕ ಗಾಂಜಾ ಮಾರಾಟ ಮಾಡುತ್ತಿರುವ ಮಾಹಿತಿ ಪಡೆದ ತಂಡ ಬಂಧಿಸಿದೆ. ಬಂಧಿತನಿAದ ರೂ. 20,000 ಮೌಲ್ಯದ 998 ಗ್ರಾಂ ಗಾಂಜಾ ಹಾಗೂ ಸ್ಕೂಟರನ್ನು ವಶಪಡಿಸಿಕೊಳ್ಳಲಾಗಿದೆ. ಒಟ್ಟು ಮೌಲ್ಯ ರೂ. 52,800 ಆಗಿದೆ.

ಅದೇ ದಿನ ಕಂಕನಾಡಿ ಪೊಲೀಸ್ ಠಾಆ ವ್ಯಾಪ್ತಿಯ ಪಡೀಲ್ ರೈಲ್ವೇ ಫ್ಲೆöÊಓವರ್ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಕಲ್ಲಾಪು ಪಟ್ಲ ನಿವಾಸಿ ನಿಝಾಮ್ ಯಾನೆ ನಿಜ್ಜಾ ಎಂಬಾತನನ್ನು ಬಂಧಿಸಿರುವ ಪೊಲೀಸ್ ತಂಡ, ಮೊಬೈಲ್ ಹಾಗೂ 254 ಗ್ರಾಂ ತೂಕದ ಗಾಂಜಾ ಒಟ್ಟು ರೂ. 9,900 ಬೆಲೆ ಸೊತ್ತುಗಳನ್ನು ವಶಪಡಿಸಿಕೊಂಡಿದೆ. ಈತನ ಮೇಲೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವಾರೆಂಟ್ ಇದ್ದು, ಒಂದು ವರ್ಷದಿಂದ ನ್ಯಾಯಾಲಯದಿಂದ ತಲೆಮರೆಸಿಕೊಂಡಿದ್ದನು.

ಕಾರ್ಯಾಚರಣೆಯ ನೇತೃತ್ವವನ್ನು ಮಂಗಳೂರು ದಕ್ಷಿಣ ವಿಭಾಗದ ಎಸಿಪಿ ಧನ್ಯ ಎನ್. ನಾಯಕ್ ವಹಿಸಿದ್ದು, ತಂಡದಲ್ಲಿ ಪಿಎಸ್ ಐ ಪುನೀತ್ ಗಾಂವ್ಕರ್, ಹೆಚ್.ಸಿಗಳಾದ ಶಾಜು ನಾಯರ್, ಮಹೇಶ್ ಹಾಗೂ ಕಾನ್ಸ್ ಸ್ಟೇಬಲ್ ಗಳಾದ ಶಿವರಾಜ್, ಅಕ್ಬರ್ ಮತ್ತು ತಿರುಮಲೇಶ್ ಭಾಗವಹಿಸಿದ್ದರು.

ಮಾರ್ಚ್ ತಿಂಗಳಲ್ಲಿ ಮಂಗಳೂರು ನಗರ ದಕ್ಷಿಣ ಉಪವಿಭಾಗದ ಠಾಣಾ ವ್ಯಾಪ್ತಿಯಲ್ಲಿ 56 ಸಂಶಯಾಸ್ಪದ ವ್ಯಕ್ತಿಗಳನ್ನು ಂಆದಕ ವಸ್ತು, ಸೇವನೆ ವೈದ್ಯಕೀಯ ಪರೀಕ್ಷೆ ಮಾಡಿಸಿದ್ದು, ಅದರಲ್ಲಿ 26 ವ್ಯಕ್ತಿಗಳ ಮಾದಕ ವಸ್ತು ಸೇವನೆ ಮಾಡಿರುವ ಬಗ್ಗೆ ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಆಯಾ ಠಾಣೆಗಳಲ್ಲಿ ಎನ್ ಡಿಪಿಎಸ್ ಕಾಯಿದೆಯಂತೆ ಅವರೆಲ್ಲರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.


Spread the love