ಗಾಂಜಾ ಮಾರಾಟ ಆರೋಪಿಯ ಬಂಧನ

ಗಾಂಜಾ ಮಾರಾಟ ಆರೋಪಿಯ ಬಂಧನ

ಮಂಗಳೂರು: ಗಾಂಜಾ ಮಾರಾಟ ಮಾಡಲು ಯತ್ನಸುತ್ತಿದ್ದ ವ್ಯಕ್ತಿಯನ್ನು ಬಂಟ್ವಾಳ ನಗರ ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಬಂಟ್ವಾಳ ಮಂಚಿ ನಿವಾಸಿ ಸಂಶುದ್ಧಿನ್ (25) ಎಂದು ಗುರುತಿಸಲಾಗಿದೆ.
ಜೂನ್ 3 ರಂದು ಮೂಡ ಗ್ರಾಮದ ತಲಪಾಡಿ ಬಳಿಯ ದುರ್ಗಾ ಗ್ಯಾರೇಜ್ ಬಳಿಯಲ್ಲಿ ಒರ್ವ ವ್ಯಕ್ತಿಯು ಗಾಂಜಾವನ್ನು ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿಯಂತೆ ಚಂದ್ರಶೇಖರ್ ಹೆಚ್.ವಿ ಪೊಲೀಸ್ ಉಪನಿರೀಕ್ಷಕರು ಮತ್ತು ಸಿಬ್ಬಂದಿಗಳು ಬಂಟ್ವಾಳ ನಗರ ಠಾಣೆಯವರು ದಾಳಿ ನಡೆಸಿ, ಕೂಲಂಷವಾಗಿ ವಿಚಾರಿಸಲಾಗಿ ಉಳ್ಳಾಲ ಎಂಬಲ್ಲಿನ ಮಿಸ್ಬಾ ಎಂಬಾತನಿಂದ ಉಪ್ಪಿನಂಗಡಿಯ ಒರ್ವ ವ್ಯಕ್ತಿ ಯ ಮುಖಾಂತರ ಗಾಂಜಾವನ್ನು ಮಾರಾಟ ಮಾಡುತ್ತಿರುವುದಾಗಿ ತಿಳಿಸಿರುತ್ತಾನೆ. ಸದ್ರಿ ಗಾಂಜಾವು ಒಟ್ಟು 1.896 ಕೆ.ಜಿ ತೂಕವಿರುತ್ತದೆ. ಇದರ ಅಂದಾಜು ಮೌಲ್ಯ 40.000/- ರೂ ಆಗಬಹುದಾಗಿರುತ್ತದೆ ಮತ್ತು ಆರೋಪಿಯ ಬಳಿಯಲ್ಲಿ ಮೊಬೈಲ್ ಫೋನ್ ಇದ್ದು, ಅದರ ಅಂದಾಜು ಮೌಲ್ಯ 5000/- ರೂ ಹಾಗೂ ನಗದು 110/- ರೂ ಇರುತ್ತದೆ.
ಸೊತ್ತು ಮತ್ತು ಆರೋಪಿಯನ್ನು ವಶಕ್ಕೆ ಪಡೆದು ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಕಲಂ: 8 ಸಿ, 20 ಬಿ ಎನ್.ಡಿ.ಪಿ.ಎಸ್ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.