ಗಾಂಜಾ ಮಾರಾಟ ಯತ್ನ ಇಬ್ಬರ ಬಂಧನ

Spread the love

ಗಾಂಜಾ ಮಾರಾಟ ಯತ್ನ ಇಬ್ಬರ ಬಂಧನ

ಮಂಗಳೂರು: ಅಕ್ರಮವಾಗಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರನ್ನು ಬರ್ಕೆ ಪೋಲಿಸರು ಬಂಧಿಸಿದ್ದಾರೆ.
ಬಂಧಿತರನ್ನು ಓರಿಸ್ಸಾದ ಶಾಂತನು ಕುಮಾರ್ ಸಾಹು (20) ಮತ್ತು ಮಂಗಳೂರು ನಿವಾಸಿ ವಿಕ್ರಮ್ ಯಾನೆ ವಿಕ್ಕಿ (27) ಎಂದು ಗುರುತಿಸಲಾಗಿದೆ.

ಖಚಿತ ಮಾಹಿತಿಯಂತೆ ಬುಧವಾರ ಬೆಳಿಗ್ಗೆ ಬರ್ಕೆ ಠಾಣಾ ಎಸ್ ಐ ರಾಜೇಶ್ ಅವರು ಮಂಗಳ ಕ್ರೀಡಾಂಗಣದ ಬಳಿ ಇಬ್ಬರು ವ್ಯಕ್ತಿಗಳು ಗಾಂಜಾವನ್ನು ದೊಡ್ಡ ಪ್ರಮಾಣದಲ್ಲಿ ಓರಿಸ್ಸಾದಿಂದ ತಂದು ನಗರದಲ್ಲಿ ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಗಾಂಜಾವನ್ನು ಮಾರಾಟ ಮಾಡಲು ಕಾಯುತ್ತಿದ್ದಾರೆ ಎಂಬ ಮಾಹಿತಿಯನ್ವಯ ಎಸಿಪಿ ಕ್ರೈಂ ವಿಭಾಗದ ಸಿಬಂದಿ ಧಾಳಿ ನಡೆಸಿ ಆರೋಪಿತರನ್ನು ಬಂಧಿಸಿ ಬಂಧಿತರಿಂದ ಅವರಲ್ಲಿದ್ದ 5 ಕೆಜಿ ಗಾಂಜಾ, ಗಾಂಜಾ ಮಾರಾಟ ಮಾಡಲು ಉಪಯೋಗಿಸಿದ್ದ ಆಟೋರಿಕ್ಷಾ, ಎರಡು ಮೊಬೈಲ್ ಫೋನ್ ಮತ್ತು ನಗದು ಹಣ ಹಾಗೂ ತೂಕದ ಮೇಶಿನ್ ವಶಪಡಿಸಿಕೊಂಡಿದ್ದು, ಸ್ವಾಧೀನಪಡಿಕೊಂಡ ಒಟ್ಟು ಮೌಲ್ಯ ರೂ 4,37,500 ಆಗಿದೆ.

ಮಂಗಳೂರು ಕೇಂದ್ರ ಉಪವಿಭಾಗದ ಸಹಾಯಕ ಪೋಲಿಸ್ ಆಯುಕ್ತ ಉದಯ್ ನಾಯಕ್ ಮಾರ್ಗದರ್ಶನದಲ್ಲಿ ಮತ್ತು ಬರ್ಕೆ ಠಾಣಾ ನೀರಿಕ್ಷಕ ರಾಜೇಶ್ ನೇತೃತ್ವದಲ್ಲಿ ಅಪರಾಧ ವಿಭಾಗದ ಪಿಎಸ್ ಐ ನರೇಂದ್ರ, ಪ್ರಕಾಶ್, ಗಣೇಶ್ ಅತ್ತಾವರ, ಕಿಶೋರ್ ಕೋಟ್ಯಾನ್, ಕಿಶೋರ್ ಪೂಜಾರಿ, ನಾಗರಾಜ್ ಹಾಗೂ ಇತರರು ಪತ್ತೆಗೆ ಸಹಕರಿಸಿದ್ದರು.


Spread the love