ಗ್ರಂಥಪಾಲಕಿ ಭಾರತಿಯವರಿಗೆ ಡಾಕ್ಟರೇಟ್ ಪದವಿ

Spread the love

ಗ್ರಂಥಪಾಲಕಿ ಭಾರತಿಯವರಿಗೆ ಡಾಕ್ಟರೇಟ್ ಪದವಿ

ಬಂಟ್ವಾಳ : ಸಹ್ಯಾಧ್ರಿ ತಾಂತ್ರಿಕ ಕಾಲೇಜಿನ ಗ್ರಂಥಪಾಲಕಿ ಶ್ರೀಮತಿ ಭಾರತಿ ಕೆ ಇವರು ಗ್ರಂಥಾಲಯ ಮತ್ತು ಮಾಹಿತಿ ವಿಜ್ನಾನದಲ್ಲಿ ಡಾಕ್ಟರೇಟ್ ಪದವಿಯನ್ನು ಪಡೆದಿರುತ್ತಾರೆ.

ಇವರು ಡಾಕ್ಟರ್ ಸುಜಾತ ಹೆಚ್. ಆರ್. ಗ್ರಂಥಪಾಲಕಿ (ಸೀನಿಯರ್ ಗ್ರೇಡ್) ಶ್ರೀ ವೆಂಕಟರಮನ ಸ್ವಾಮಿ ಕಾಲೇಜು, ಬಂಟ್ವಾಳ, ಇವರ ಮಾರ್ಗ್‍ದರ್ಶನದಲ್ಲಿ ಮಂಡಿಸಿರುವ ಮಹಾಪ್ರಬಂಧ “ಡಿಜಿಟಲ್ ಲೈಬ್ರೆರೀಸ್ ಇನ್ ಇಂಜಿನೀಯರಿಂಗ್ ಎಜುಕೇಷನಲ್ ಇಸ್ಟಿಟ್ಯೂಷನ್ಸ್ ಇನ್ ಕರ್ನಾಟಕ ಸ್ಟೇಟ್: ಆನ್ ಏನಲಿಟಿಕಲ್ ಸ್ಟಡಿ” ಗೆ ಪ್ರಿಸ್ಟ್ ವಿಶ್ವವಿದ್ಯಾಲಯ, ತಂಜಾವೂರು, ತಮಿಳುನಾಡು ಡಾಕ್ಟರೇಟ್ ಪದವಿಯನ್ನು ನೀಡಿದೆ.

ಇವರು ಸುಮಾರು 15ವರ್ಷಗಳಿಂದ ಸಹ್ಯಾಧ್ರಿ ಕಾಲೇಜಿನಲ್ಲಿ ಗ್ರಂಥಪಾಲಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ವಾಮಂಜೂರಿನ ಮೆಸ್ಕಾಂ ಉದ್ಯೋಗಿ ಶ್ರೀ ಜಯಪ್ರಕಾಶ್ ಅವರ ಧರ್ಮಪತ್ನಿ ಹಾಗೂ ಪುತ್ತೂರು ತಾಲೂಕು ಈಶ್ವರಮಂಗಲ ಕುದ್ರೋಳಿ ಮುತ್ತಪ್ಪ ಪೂಜಾರಿ ಮತ್ತು ಸುಗುನಾವತಿ ದಂಪತಿ ಪುತ್ರಿ.


Spread the love