ಚಿಕಿತ್ಸೆಗೆ ಧನಸಹಾಯ ನೀಡಿ ಮಾನವೀಯತೆ ಮೆರೆದ ಮೊಗವೀರ್ಸ್ ಅಸೋಸಿಯೇಷನ್ ಕುವೈತ್  

119
Spread the love

ಚಿಕಿತ್ಸೆಗೆ ಧನಸಹಾಯ ನೀಡಿ ಮಾನವೀಯತೆ ಮೆರೆದ ಮೊಗವೀರ್ಸ್ ಅಸೋಸಿಯೇಷನ್ ಕುವೈತ್  

ಕುವೈತ್: ಬ್ರಹ್ಮಾವರದ ವಾರಂಬಳ್ಳಿ ಗ್ರಾಮದ ನಿವಾಸಿ, ಉಮೇಶ್ ಮರಕಾಲ ಇವರ ಮಗಳು ನಾಲ್ಕು ವರ್ಷದ ಬಾಲಕಿ ದೀಕ್ಷಾ ಬ್ಲಡ್ ಕ್ಯಾನ್ಸರ್ ನಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ ಮಣಿಪಾಲದ ಕರ್ಸ್ತೂಬಾ ಆಸ್ಪತ್ರೆಗೆ ದಾಖಲಾಗಿದ್ದು, ವೈದ್ಯರುಗಳ ಪ್ರಕಾರ ಅಂದಾಜು ಹತ್ತು ಲಕ್ಷ ರೂಪಾಯಿಗಳ ಖರ್ಚು ಭರಿಸಬೇಕಿದ್ದು, ಕುಟುಂಬವು ಕಡು ಬಡತನದಿಂದ ಜೀವನ ಸಾಗಿಸುತ್ತಿದ್ದುದರಿಂದ, ಮಗಳ ಚಿಕಿತ್ಸೆಗಾಗಿ ಸಲ್ಲಿಸಿದ ಮನವಿಗೆ ಸ್ಪಂದಿಸಿ, ’ಮೊಗವೀರ್ಸ್ ಅಸೋಸಿಯೇಷನ್ ಕುವೈತ್’ (MAK) ನ ಸದಸ್ಯರು ನೀಡಿದ ಧನಸಹಾಯ ರೂ.75,000 ಚೆಕ್‍ನ್ನು ಇತ್ತೀಚೆಗೆ ಸಂಘದ ಪರವಾಗಿ ಶ್ರೀಮತಿ ಕವಿತಾ ರಮೇಶ್ ಕಿದಿಯೂರು, ಪ್ರಸಿದ್ಧ ಸಮಾಜ ಸೇವಕಿ, ಶ್ರೀಮತಿಸರಳಾ ಬಿ. ಕಾಂಚನ್, ಮೊಗವೀರ ಸಭಾದ ಅಧ್ಯಕ್ಷರು ಶ್ರೀ ದಾಮೋಧರ ಸುವರ್ಣ ಮತ್ತು ಶ್ರೀಮತಿ ಪ್ರಭಾ ಸುವರ್ಣ ಇವರ ಮೂಲಕ ಜುಲೈ 24 ರಂದು ಆಸ್ಪತ್ರೆಯಲ್ಲಿ ಹಸ್ತಾಂತರಿಸಲಾಯಿತು.

ಬಡತನದ ಕಾರಣದಿಂದ ಹೆಚ್ಚಿನ ಚಿಕಿತ್ಸಾ ವೆಚ್ಚ ಭರಿಸಲು ಕಷ್ಟಸಾಧ್ಯವಾದ್ದರಿಂದ ಊರ-ಪರವೂರ ಧಾನಿಗಳು, ಸಂಘ-ಸಂಸ್ಥೆಗಳು, ಸಮಾಜ ಸೇವಕರು, ಸ್ವಜಾತಿ ಸಮಾಜ ಬಾಂಧವರು ಧನ ಸಹಾಯ ನೀಡಬೇಕೆಂದು ಮೊಗವೀರ್ಸ್ ಅಸೋಸಿಯೇಷನ್ ಕುವೈತ್ ಇದರ ಅಧ್ಯಕ್ಷ ರಮೇಶ್ ಕಿದಿಯೂರು ಮನವಿ ಮಾಡಿಕೊಂಡಿದ್ದಾರೆ.ಉಮೇಶ ಮರಕಾಲ ಇವರಮೊಬೈಲ್ ಸಂಖ್ಯೆ: 9448261537ಹಾಗೂಬ್ಯಾಂಕ್ ಖಾತೆಯ ವಿವರ ಹೀಗಿದೆ.
UMESH MARAKALA, A/C 7172500100324401, IFSC CODE KARB0000717, KARNATAKA BANK, Branch-Brahmavara.


Spread the love