ಚಿಕ್ಕಮಗಳೂರಿನಲ್ಲಿ ಹಾಡಹಗಲೇ ಜುವೆಲರಿ ಅಂಗಡಿಯಲ್ಲಿ ಶೂಟೌಟ್

Spread the love

ಚಿಕ್ಕಮಗಳೂರಿನಲ್ಲಿ ಹಾಡಹಗಲೇ ಜುವೆಲರಿ ಅಂಗಡಿಯಲ್ಲಿ ಶೂಟೌಟ್

ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಿನಲ್ಲಿ ಹಾಡಹಗಲೇ ನಗರದಲ್ಲಿ ಚಿನ್ನದ ಅಂಗಡಿ ಮಾಲೀಕನ ಮೇಲೆ ಬೈಕ್ನಲ್ಲಿ ಬಂದ ಅಪರಿಚಿತರಿಂದ ಗುಂಡಿನ ದಾಳಿ ನಡೆಸಿದ್ದು ಪರಾರಿಯಾಗಿದ್ದಾರೆ.

ನಗರದ ಖ್ಯಾತ ಉದ್ಯಮಿ ಎಂ.ಜಿ.ರಸ್ತೆಯಲ್ಲಿರುವ ಕೇಸರಿ ಜ್ಯುವೆಲ್ಲರ್ಸ್ ಮಾಲೀಕರ ಮೇಲೆ ಪಲ್ಸರ್ ಬೈಕ್ನಲ್ಲಿ ಬಂದ ಮೂವರು ದರೋಡೆಕೋರರು ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ.

ಪಲ್ಸರ್ ಬೈಕ್ನಲ್ಲಿ ಬಂದಿದ್ದ ಮೂವರು ಸಿನಿಮೀಯ ರೀತಿಯಲ್ಲಿ ಅಂಗಡಿಗೆ ದಾಳಿ ನಡೆಸಿದ್ದು, ಶಾಪ್ ಮಾಲೀಕನಿಗೆ ಗನ್ ತೋರಿಸಿ ಚಿನ್ನಾಭರಣ ದೋಚಲು ಯತ್ನಿಸಿದ್ದಾರೆ. ಈ ವೇಳೆ ಅಂಗಡಿ ಮಾಲೀಕ ನಿರಾರಿಸಿದ್ದು, ಯಾರಾದರೂ ಸಹಾಯಕ್ಕೆ ಬರುವಂತೆ ಜೋರಾಗಿ ಕೂಗಿದ್ದಾರೆ. ತಕ್ಷಣ ಜ್ಯುವೆಲ್ಲರ್ ಮಾಲಿಕನ ಮೇಲೆ ಫೈರಿಂಗ್ ಮಾಡಿದ ಕಿಡಿಗೇಡಿಗಳು ಅಲ್ಲಿಂದ ಪರಾರಿಯಾಗಿದ್ದಾರೆ.

ಸದ್ಯ ಜ್ಯುವೆಲ್ಲರ್ಸ್ ಮಾಲೀಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸ್ಥಳಕ್ಕೆ ಪೊಲೀಸರು ಬಂದು ಪರೀಶೀಲನೆ ನಡೆಸಿದ್ದಾರೆ. ಅಲ್ಲದೇ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ.


Spread the love