ಚುನಾವಣಾ ಫಲಿತಾಂಶ ಬಿಜೆಪಿ ನಗರ ಯುವ ಮೋರ್ಚಾ ವತಿಯಿಂದ ವಿಜಯೋತ್ಸವ

Spread the love

ಚುನಾವಣಾ ಫಲಿತಾಂಶ ಬಿಜೆಪಿ ನಗರ ಯುವ ಮೋರ್ಚಾ ವತಿಯಿಂದ ವಿಜಯೋತ್ಸವ

ಉಡುಪಿ: ಉತ್ತರಪ್ರದೇಶ ಮತ್ತು ಉತ್ತರಾಖಂಡದಲ್ಲಿ ಬಿಜೆಪಿಯು ಅಭೂತಪೂರ್ವ ಜಯಗಳಿಸಿದ ಪ್ರಯುಕ್ತ ಉಡುಪಿ ನಗರ ಬಿಜೆಪಿ ಯುವ ಮೋರ್ಚಾ ವತಿಯಿಂದ ಪರ್ಕಳದಲ್ಲಿ ವಿಜಯೋತ್ಸವ ಆಚರಿಸಲಾಯಿತು.

ಹೆರ್ಗ, ಪರ್ಕಳ, ಈಶ್ವರನಗರ ಮತ್ತು ಸರಳೆಬೆಟ್ಟು ವಾರ್ಡಿನ ಯುವ ಬಿಜೆಪಿ ಕಾರ್ಯಕರ್ತರು ಸಿಡಿಮದ್ದು ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಜಯಘೋಷ ಹಾಕಿದರು.

ಈ ಸಂಧರ್ಬಧಲ್ಲಿ ಉಡುಪಿ ನಗರ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಅಕ್ಷಿತ್ ಶೆಟ್ಟಿ ಹೆರ್ಗ, ಕಾರ್ಯಕರ್ತರಾದ ಆದರ್ಶ್ ನಾಯಕ್, ವಿಘ್ಷೇಶ್ ಶಾನುಭಾಗ್ ಹಾಗೂ ಇತರ ಬಿಜೆಪಿ ನಾಯಕರು ಉಪಸ್ಥಿತರಿದ್ದರು.


Spread the love