ಕೇಂದ್ರ ಹಾಗೂ ರಾಜ್ಯ ಸರಕಾರಗಳ ಜನವಿರೋಧಿ ನೀತಿ ವಿರುದ್ದ ಜೆಡಿಎಸ್ ಪ್ರತಿಭಟನೆ

Spread the love

ಕೇಂದ್ರ ಹಾಗೂ ರಾಜ್ಯ ಸರಕಾರಗಳ ಜನವಿರೋಧಿ ನೀತಿ ವಿರುದ್ದ ಜೆಡಿಎಸ್ ಪ್ರತಿಭಟನೆ
ಉಡುಪಿ: ಕೇಂದ್ರ ಸರಕಾರ ಗ್ಯಾಸ್ ಬೆಲೆ ಏರಿಕೆ ಮಾಡಿ ಸಾಮಾನ್ಯ ಜನರ ಬದುಕನ್ನು ಸಂಪೂರ್ಣ ದುಸ್ತರ ಮಾಡಿದೆ ಉಡುಪಿ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಯೋಗಿಶ್ ಶೆಟ್ಟಿ ಹೇಳಿದರು.

ಅವರು ನಗರದ ಸರ್ವಿಸ್ ಬಸ್ ನಿಲ್ದಾಣದಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರದ ಜನವಿರೋಧಿ ನೀತಿಗಳ ವಿರುದ್ದ ಜಿಲ್ಲಾ ಜೆಡಿಎಸ್ ವತಿಯಿಂದ ಆಯೋಜಿಸಿದ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಜನಪರ ಯೋಜನೆಗಳನ್ನು ನೀಡುವುದಾಗಿ ಹೇಳಿ ಚುನಾವಣೆಯಲ್ಲಿ ಗೆದ್ದು ಬಂದ ಕೇಂದ್ರದ ಬಿಜೆಪಿ ಸರಕಾರ ಹಾಗೂ ರಾಜ್ಯದ ಕಾಂಗ್ರೆಸ್ ಸರಕಾರ ಮಧ್ಯಮ ವರ್ಗದ ಜನರನ್ನು ಸಮಸ್ಯೆಗೆ ದೂಡಿದ್ದಾರೆ. ಚುನಾವಣಾ ಪೂರ್ವ ಆಶೋತ್ತರಗಳನ್ನು ಪೋರೈಸುವಲ್ಲಿ ಎರಡು ಸರಕಾರಗಳು ಕೂಡ ವಿಫಲವಾಗಿದೆ. ಕೇಂದ್ರ ಸರಕಾರ ಗ್ಯಾಸಿನ ಬೆಲೆಯನ್ನು ಕಳೆದ ಎರಡು ವರ್ಷದ ಅವಧಿಯಲ್ಲಿ ಅತೀರೇಕವಾಗಿ ಹೆಚ್ಚಿಸಿದ್ದು, ಸಾಮಾನ್ಯ ಮಹಿಳೆಯರು ಇದರಿಂದ ಸಮಸ್ಯೆಯನ್ನು ಎದುರಿಸುವಂತಾಗಿದೆ. ನೋಟ್ ಅಮಾನ್ಯಿಕರಣದ ಪರಿಣಾಮ ದೇಶದ ಮಧ್ಯಮ ವರ್ಗ ಹಾಗೂ ಬಡ ಜನರು ತೀವ್ರ ಸಂಕಷ್ಟವನ್ನು ಅನುಭವಿಸಿದ್ದು ಇನ್ನೂ ಕೂಡ ನೋಟಿನ ಸಮಸ್ಯೆ ಪರಿಹಾರಗೊಂಡಿಲ್ಲ. ರಾಜ್ಯದಲ್ಲಿ ಇರುವ ಕಾಂಗ್ರೆಸ್ ಪಕ್ಷ ರೈತರ ಬಗ್ಗೆ ತಮ್ಮ ಕಾಳಜಿಯನ್ನು ಸಂಪೂರ್ಣ ಮರೆತಿದ್ದು, ಸದಾ ಪರಸ್ಪರ ಕಚ್ಚಾಟದಲ್ಲಿ ತೊಡಗಿದ್ದಾರೆ. ಡೈರಿ ಹಗರಣ ಸದಾ ಮುಳುಗಿರುವ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ರಾಜ್ಯ ಅಭಿವೃದ್ದಿಯನ್ನು ಮರೆತಿದ್ದಾರೆ. ಬಿಜೆಪಿ ಆಡಳಿದ ಸಮಯದಲ್ಲಿ 3 ಮುಖ್ಯಮಂತ್ರಿಗಳನ್ನು ರಾಜ್ಯ ಕಂಡಿದ್ದು, ಅದರಲ್ಲಿ ಒರ್ವ ಮುಖ್ಯಮಂತ್ರಿ ಜೈಲಿಗೆ ಹೋದ ಇತಿಹಾಸವನ್ನು ಹೊಂದಿದ್ದಾರೆ. ಕೇವಲ 20 ತಿಂಗಳು ಅಧಿಕಾರ ನಡೆಸಿದ ಜೆಡಿಎಸ್ ನಾಯಕ ಕುಮಾರಸ್ವಾಮಿ ರಾಜ್ಯದ ಜನ ಸದಾ ನೆನಪಿಡುವಂತಹ ಅಭಿವೃದ್ಧಿ ಪರ ಅಧಿಕಾರವನ್ನು ನೀಡಿದ್ದರು. ಅದೇ ರೀತಿಯ ಆಡಳಿತವನ್ನು ರಾಜ್ಯದ ಜನ ಪುನಃ ಅಪೇಕ್ಷೆ ಪಡುತ್ತಿದ್ದು, ರಾಜ್ಯದಲ್ಲಿ ಪ್ರಾದೇಶಿಕ ಪಕ್ಷವನ್ನು ಜನ ಮುಂದಿನ ಚುನಾವಣೇಯಲ್ಲಿ ಆರಿಸಲಿದ್ದಾರೆ ಎಂದರು.
ಇದೇ ವೇಳೆ ಮಾತನಾಡಿದ ವಾಸುದೇವ ರಾವ್ ಅವರು ದಿನಕ್ಕೊಂದು ಕಾನೂನು ಜಾರಿಗೆಗೊಳೀಸುವ ಮೂಲಕ ಮೋದಿ ಸರಕಾರ ಜನರನ್ನು ಗೊಂದಲದಲ್ಲಿ ಮುಳುಗಿಸಿದೆ ಎಂದರು.

ಜೆಡಿಎಸ್ ನಾಯಕಿ ಶಾಲಿನಿ ಶೆಟ್ಟಿ ಕೆಂಚನೂರು, ರೋಹಿತ್ ಕರಂಬಳ್ಳಿ, ಪ್ರದೀಪ್ ಹಾಗೂ ಇತರರು ಉಪಸ್ಥಿತರಿದ್ದರು.


Spread the love

1 Comment

Comments are closed.