ಜನತಾದಳ ಮುಖಂಡ ಸುಕುಮಾರ್ ರಾವ್ ನಿಧನ

Spread the love

ಜನತಾದಳ ಮುಖಂಡ ಸುಕುಮಾರ್ ರಾವ್ ನಿಧನ

ಉಳ್ಳಾಲ: ಹಿರಿಯ ಜನತಾ ದಳ ಮುಖಂಡ ಸುಕುಮಾರ ರಾವ್ ಕೋಟೆಕಾರ್ ಭಾನುವಾರ ರಾತ್ರಿ ನಿಧನರಾದರು. ಅವರಿಗೆ 66 ವರ್ಷವಾಗಿತ್ತು.. ಸ್ವಲ್ಪ ಸಮಯದಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು.

ಜನತಾ ಪರಿವಾರ ಕಾಲದಿಂದಲೂ ಪಕ್ಷ ಸಂಘಟನೆಯಲ್ಲಿ ಅವರು ಮುಂಚೂಣಿಯಲ್ಲಿ ಇದ್ದರು. ಅವರು ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

ಕೋಟೆಕಾರು ಶಾಲೆಯಲ್ಲಿ ಅವರ ಮುಂದಾಳುತ್ವದಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಗಣೇಶೋತ್ಸವ ಮುಂದಿನ ವರ್ಷ ಸ್ವರ್ಣಮಹೋತ್ಸವ ಆಚರಣೆಯನ್ನು ಕಾಣಲಿದೆ. ಸುಕುಮಾರ್ ರಾವ್ ಅವರ ಅಂತ್ಯಕ್ರಿಯೆ ಸೋಮವಾರ ಅಪರಾಹ್ನ ಮೂರು ಗಂಟೆಗೆ ನಡೆಯಲಿದೆ.


Spread the love