ಜನತಾ ಕರ್ಪ್ಯೂ : ಚಂಡೆ ಬಾರಿಸುವುದರ ಮೂಲಕ ಕೃತಜ್ಞನೆ ಸಲ್ಲಿಸಿದ ಮಡುಂಬು ಯುವತಿಯರು

ಕೋವಿಡ್ -19 : ಚಂಡೆ ಬಾರಿಸುವುದರ ಮೂಲಕ ಕೃತಜ್ಞನೆ ಸಲ್ಲಿಸಿದ ಮಡುಂಬು ಯುವತಿಯರು

ಉಡುಪಿ: ದೇಶಾದ್ಯಂತ ವ್ಯಾಪಿಸಿರುವ ಕೊರೋನಾ ಸೋಂಕು ತಡೆಯುವ ಉದ್ದೇಶದೊಂದಿಗೆ ಪ್ರಧಾನಿ ನರೇಂದ್ರ ಮೋದಿ ಇಂದು ಕರೆ ನೀಡಿದ್ದ ಜನತಾ ಕರ್ಪ್ಯೂಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಜನತೆ ಮನೆಯ ಬಾಲ್ಕನಿ, ಕಿಟಕಿಗಳ ಮೂಲಕ ಹೊರಬಂದು, ಸಾಂಕ್ರಾಮಿಕ ರೋಗದ ವಿರುದ್ಧದ ಸೇವೆಯಲ್ಲಿ ತೊಡಗಿರುವವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಅದರಂತೆ ಉಡುಪಿಯ ಇನ್ನಂಜೆ ಮಡುಂಬು ವಿಷ್ಣುಮೂರ್ತಿ ದೇವಸ್ಥಾನದ ಬಳಿ ಯುವತಿಯರು ಚಂಡೆ ಬಾರಿಸುವ ಮೂಲಕ ಕರೋನಾ ವೈರಸ್ ವಿರುದ್ಧ ಕಾರ್ಯನಿರ್ವಹಿಸುತ್ತಿರುವ ವೈದ್ಯರಿಗೆ ಧನ್ಯವಾದ ಅರ್ಪಿಸಿದರು.

ಕೋವಿಡ್ -19ನಿಂದ ದೇಶ ಮುಕ್ತವಾಗಲು ಜನತಾ ಕರ್ಫೂನಲ್ಲಿ ಪಾಲ್ಗೊಂಡ ಜನತೆ 5 ಗಂಟೆ 5 ನಿಮಿಷಕ್ಕೆ ಮನೆಯ ಬಾಲ್ಕನಿ, ಕಿಟಕಿಗಳ ಮೂಲಕ ಹೊರಬಂದು , ಸೇವೆಯಲ್ಲಿ ತೊಡಗಿರುವವವರಿಗೆ ಧನ್ಯವಾದ ಸಲ್ಲಿಸುವಂತೆ ಪ್ರಧಾನಿ ಹೇಳಿಕೆ ನೀಡಿದ್ದರು. ಅವರ ಹೇಳಿಕೆಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಜನತೆ ಆದೇ ರೀತಿಯಲ್ಲಿ ಹೊರಬಂದು ಧನ್ಯವಾದ ಸಲ್ಲಿಸಿದ್ದಾರೆ.

Leave a Reply

  Subscribe  
Notify of