ಜನವರಿ 9: ಮೀನುಗಾರಿಕೆ ಸಚಿವರಿಂದ ಉಡುಪಿ ಜಿಲ್ಲೆಯಲ್ಲಿ ಪ್ರವಾಸ

Spread the love

ಜನವರಿ 9: ಮೀನುಗಾರಿಕೆ ಸಚಿವರಿಂದ ಉಡುಪಿ ಜಿಲ್ಲೆಯಲ್ಲಿ ಪ್ರವಾಸ

ಉಡುಪಿ :ರಾಜ್ಯದ ಪಶು ಸಂಗೋಪನೆ ಮತ್ತು ಮೀನುಗಾರಿಕೆ ಸಚಿವ ವೆಂಕಟರಾವ್ ನಾಡಗೌಡ ಅವರು ಜನವರಿ 9 ಮತ್ತು 10  ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.

ಜನವರಿ 9 ರಂದು ಸಂಜೆ 4 ಕ್ಕೆ ಉಡುಪಿಗೆ ಆಗಮಿಸಿ , ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿ ನಾಪತ್ತೆಯಾದ ಮಲ್ಪೆ ಬಡಾನಿಡಿಯೂರಿನ ಚಂದ್ರ ಶೇಖರ ಕೋಟ್ಯಾನ್, ದಾಮೋದರ್, ಮನೆಗಳಿಗೆ ಭೇಟಿ, 5.30 ಕ್ಕೆ ಜಿಲ್ಲಾಧಿಕಾರಿಗಳ ಕಚೇರಿ ಉಡುಪಿಯಲ್ಲಿ ಮೀನುಗಾರಿಕಾ ಇಲಾಖಾ ಅಧಿಕಾರಿಗಳೊಂದಿಗೆ ನಾಪತ್ತೆಯಾಗಿರುವ ಮೀನುಗಾರರ ಕುರಿತು ಸಭೆ, ನಂತರ ಪ್ರವಾಸಿ ಮಂದಿರದಲ್ಲಿ ವಾಸ್ತವ್ಯ ಮಾಡುವರು. ಜನವರಿ 10 ರಂದು ಮಂಗಳೂರಿಗೆ ತೆರಳುವರು.


Spread the love