ಜನಸಾಮಾನ್ಯರ ಜೀವನ ಮಟ್ಟ ಸುಧಾರಣೆ ಪ್ರಯತ್ನ ಸರಕಾರದ ಮೂರು ವರ್ಷದ ಸಾಧನೆ- ಸೊರಕೆ

Spread the love

ಉಡುಪಿ: ರಾಜ್ಯದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಕಳೆದ ಮೂರು ವರ್ಷಗಳಲ್ಲಿ ಜನಪರ ಯೋಜನೆಯ ಮೂಲಕ ರಾಜ್ಯದ ಸರ್ವತೋಮುಕ ಅಭಿವೃದ್ದಿಗೆ ವಿವಿಧ ಯೋಜನೆಗಳನ್ನು ರೂಪಿಸಿ ಜನಸಾಮಾನ್ಯರ ಜೀವನಮಟ್ಟವನ್ನು ಉನ್ನತಿಗೇರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸಿದ್ದು ಮೂರು ವರ್ಷದ ಪ್ರಮುಖ ಸಾಧನೆ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ರಾಜ್ಯ ನಗರಾಭಿವೃದ್ಧಿ ಸಚಿವ ವಿನಯ್ ಕುಮಾರ್ ಸೊರಕೆ ಹೇಳಿದರು.

image005yuvajana-mela-udupi-20160524 image006yuvajana-mela-udupi-20160524 image011yuvajana-mela-udupi-20160524

ಅವರು ಮಂಗಳವಾರ ಪ್ರೆಸ್‍ಕ್ಲಬ್ ನಲ್ಲಿ ರಾಜ್ಯ ಸರಕಾರ, ನಗರಾಭಿವೃದ್ಧಿ ಇಲಾಖೆ ಹಾಗೂ ಉಡುಪಿ ಜಿಲ್ಲೆಯಲ್ಲಿ ಕಾಂಗ್ರೆಸ್ ಸರಕಾರದ ಮೂರು ವರ್ಷಗಳ ಸಾಧನೆಯ ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಸರ್ಕಾರದ ಮೂರು ವರ್ಷಗಳ ಸಾಧನ ಸಮಾವೇಶವನ್ನು ಈ ಬಾರಿ ಬರದ ಹಿನ್ನಲೆಯಲ್ಲಿ ರದ್ದುಗೊಳಿಸಿ ಜಿಲ್ಲಾ ಕೇಂದ್ರಗಳಲ್ಲಿ ಮಾಧ್ಯಮಗಳ ಮೂಲಕ ಜನರಿಗೆ ಸರ್ಕಾರದ ಸಾಧನೆಯನ್ನು ತಿಳಿಸಲು ಉದ್ದೇಶಿಸಿದ್ದು ಅದರಂತೆ ಎಲ್ಲಾ ಜಿಲ್ಲೆಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಮೂಲಕ ಇದನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಸಿದ್ದರಾಮಯ್ಯ ನೇತೃತ್ವದ ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕ ರಾಜ್ಯದಲ್ಲಿ ಕೃಷಿ ಇಲಾಖೆಯ ಮುಕಾಂತರ ರಾಜ್ಯದ 25 ಜಿಲ್ಲೆಗಳ 129 ತಾಲೂಕುಗಳಲ್ಲಿ ಕೃಷಿಭಾಗ್ಯದ ಮೂಲಕ 70 ಫಲಾನುಭವಿಗಳಿಗೆ ಪ್ರಯೋಜನ ಲಭಿಸಿದ್ದು, ಮಣ್ಣಿನ ಫಲವತ್ತತೆಗಾಗಿ ಸಾವಯವ ಭಾಗ್ಯ, ಹಾಗೂ ರಾಜ್ಯದ ಗ್ರಾಮೀಣ ಜನರಿಗಾಗಿ ಭೂಚೇತನ ಪ್ಲಸ್ ಯೋಜನೆ ಜಾರಿಗೆಗೊಳಿಸಲಾಗಿದೆ. ರಾಜ್ಯಕ್ಕೆ ತೋಟಗಾರಿಕಾ ರಾಜ್ಯದ ಮಾನ್ಯತೆ ದೊರಕಿದ್ದು ಅದರಂತೆ ವಾರ್ಷಿಕ 37 ಸಾವಿರ ಕೋಟಿ ತೋಟಗಾರಿಕಾ ಉತ್ಪನ್ನಗಳನ್ನು ಉತ್ಪಾದಿಸಲಾಗಿದೆ. ರಾಜ್ಯವು ಹಾಲು ಉತ್ಪಾದನೆಯಲ್ಲಿ ದೇಶದಲ್ಲಿ ಹತ್ತನೆ ಸ್ಥಾನದಲ್ಲಿದ್ದು, ಪ್ರತಿ ಲೀಟರ್ ಹಾಲಿಗೆ 4 ರೂ ಪ್ರೋತ್ಸಾಹ ಧನ ನೀಡಿದ್ದು, 8.61 ಲಕ್ಷ ಫಲಾನುಭವಿಗಳು 64651 ಕೋಟಿ ಸಬ್ಸಿಡಿ ಪಡೆದಿದ್ದಾರೆ. ಮತ್ಸ್ಯಾಶ್ರಯ ಮನೆಗೆ ನೀಡುವ ಸಹಾಯಧನದ ಮೊತ್ತವನ್ನು 60 ಸಾವಿರದಿಂದ 1.20 ಲಕ್ಕಷಕ್ಕೆ ಹೆಚ್ಚಿಸಿದ್ದು, ಮೂರು ವರ್ಷಗಳಲ್ಲಿ 4865 ಮನೆಗಳನ್ನು ಹಂಚಲಾಗಿದೆ ಎಂದರು.ವ ಇಡೀ ರಾಷ್ಟ್ರದಲ್ಲಿ ಪ್ರಥಮ ಬಾರಿಗೆ ಶೂನ್ಯ ಬಡ್ಡಿದರದಲ್ಲಿ 3 ಲಕ್ಷ ವರೆಗೆ ಕೃಷಿ ಸಾಲವನ್ನು ನೀಡಿದ ಪ್ರಥಮ ರಾಜ್ಯ ಕರ್ನಾಟಕವಾಗಿದೆ. ರಾಜ್ಯದಲ್ಲಿ 30 ಸಾವಿರ ಕೆರೆಗಳ ಅಭಿವೃದ್ಧಿಗಾಗಿ ಕೆರೆ ಅಭಿವೃದ್ಧಿ ಪ್ರಾಧಿಕಾರವನ್ನು ರಚಿಸಲಾಗಿದೆ.

image015yuvajana-mela-udupi-20160524 image017yuvajana-mela-udupi-20160524

image018yuvajana-mela-udupi-20160524 image020yuvajana-mela-udupi-20160524

ಕ್ಷೀರ ಭಾಗ್ಯ ಯೋಜನೆಯಡಿ 1 ರಿಂದ 10 ತರಗತಿ ವರೆಗೆ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಮಕ್ಕಳಿಗೆ ವಾರದಲ್ಲಿ ಮೂರು ದಿನ ಹಾಲನ್ನು ವಿತರಿಸಲಾಗುತ್ತಿದ್ದು, ಹೆಣ್ಣು ಮಕ್ಕಳ ದಾಖಲಾತಿಗೆ ಉತ್ತೇಜನದ ಸಲುವಾಗಿ ಪ್ರತಿ ಹಾಜರಾತಿಗೆ 2 ರೂ ಪ್ರೋತ್ಸಾಹ ಧನ ನೀಡಲಾಗುತ್ತದೆ. ಕಳೆದ ಮೂರು ವರ್ಷಗಳಲ್ಲಿ 24 ಮಹಿಳಾ ಪದವಿ ಕಾಲೇಜು ಹಾಗೂ 27 ಸಹ ಶಿಕ್ಷಣ ಕಾಲೇಜು 51 ಸರ್ಕಾರಿ ಶಾಲೆಗಳನ್ನು ಹೊಸದಾಗಿ ಆರಂಭಿಸಲಾಗಿದೆ. ರಸ್ತೆ ಅಫಘಾತದಲ್ಲಿ ತಕ್ಷಣ ಚಿಕಿತ್ಸೆಗಾಗಿ ಆಸ್ಪತ್ರೆಗಳಲ್ಲ ಮುಖ್ಯಮಂತ್ರಿಗ ಹರೀಶ್ ಸಾಂತ್ವಾನ ಯೋಜನೆಯನ್ನು ಆರಂಭಿಸಲಾಗಿದೆ. ಆಸಿಡ್ ದಾಳಿಗೊಳಗಾದ ಮಹಿಳೆಯರಿಗೆ ಆರ್ಥಿಕ ಪರಿಹಾರ ನೀಡಲು ರಾಜ್ಯ ಮಟ್ಟದಲ್ಲಿ 50 ಕೋಟಿ ರೂ ಗಳ ಸ್ಥೈರ್ಯ ನಿಧಿಯನ್ನು ಸ್ಥಾಪಿಸಲಾಗಿದೆ. ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಉಟ ವಸತಿ ಸಹಾಯ ಯೋಜನೆಯಾದ ವಿದ್ಯಾಸಿರಿ ಮೂಲಕ 2.20 ಲಕ್ಷ ವಿದ್ಯಾರ್ಥಿಗಳು ಪ್ರಯೋಜನ ಪಡೆಯುತ್ತಿದ್ದಾರೆ.
ಅಲ್ಪಸಂಖ್ಯಾತರ ಇಲಾಖೆಯ ವತಿಯಿಂದ 32 ಲಕ್ಷ ವಿದ್ಯಾರ್ಥೀಗಳಿಗೆ 600 ಕೋಟಿ ರೂ ವಿದ್ಯಾರ್ಥಿ ವೇತನ, ಬಿದಾಯಿ ಯೋಜನೆಯಡಿ 14 ಸಾವಿರಕ್ಕೂ ಅಧಿಕ ಮುಸ್ಲಿಂ ಅಲ್ಪಸಂಖ್ಯಾತರ ಮಕ್ಕಳ ಮದವೆಗಾಗಿ 70.65 ಕೋಟಿ ಅನುದಾಣ ನೀಡಲಾಗಿದೆ. ರಾಜೀವ್ ಆವಾಸ್ ಯೋಜನೆಯಡಿ 20 ಸಾವಿರ ಮನೆಗಳನ್ನು 1031 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಒಲಂಪಿಕ್, ವಿಶ್ವ ಚಾಂಪಿಯನ್‍ಶಿಪ್, ಕಾಮನ್ ವೆಲ್ತ್ ಇತರ ರಾಷ್ಟ್ರೀಯ ಪಂದ್ಯಗಳ ಪದಕ ವಿಜೇತರಿಗೆ ನಗದು ಬಹುಮಾನ, ನೀಡುತ್ತಿದ್ದು, ನಮ್ಮೂರ ಶಾಲೆಗಾಗಿ ನಮ್ಮ ಯುವಜನರು ಯೋಜನೆಯಡಿ ಪ್ರತಿ ಶಾಲೆಯ ಅಭಿವೃದ್ಧಿಗೆ ಗಣನೀಯ ಕೊಡುಗೆ ನೀಡಲಾಗಿದೆ. ಅನ್ನಭಾಗ್ಯ ಯೋಜೆನೆಯ ಮೂಲಕ ಇದರುವರೆಗೆ 78.14 ಲಕ್ಷ ಮೆಟ್ರಿಕ್ ಟನ್ ಆಹಾರಧಾನ್ಯವನ್ನು ವಿತರಿಸಿದ್ದು, ಎಪಿಎಲ್ ಕಾರ್ಡುದಾರರಿಗೆ ಯೋಜನೆಯನ್ನು ವಿಸ್ತರಿಸಲಾಗಿದೆ ಎಂದರು.
ತಮ್ಮ ನಗರಾಭಿವೃದ್ಧಿ ಇಲಾಖೆಯ ಸಾಧನೆಗಳನ್ನು ವಿವಿರಿಸಿದ ಸಚಿವರು ತಮ್ಮ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ತುಂಬಲು ಕ್ರಮ, ಮೂರ ನಗರಸಭೆಗಳನ್ನು ಮಹಾನಗರಪಾಲಿಕೆ, 57 ಗ್ರಾಮ ಪಂಚಾಯತ್‍ಗಳನ್ನು ನಗರ ಸ್ಥಳೀಯ ಸಂಸ್ಥೆಗಳನ್ನಾಗಿ 15 ಪಟ್ಟಣ ಪಂಚಾಯತ್ ಗಳನ್ನು ಪುರಸಭೆ ಮತ್ತು 15 ಪುರಸಭೆಗಳನ್ನು ನಗರಸಭೆಗಳನ್ನಾಗಿ ಉನ್ನತಿಕರಿಸಲಾಗಿದೆ. ಪೌರಕಾರ್ಮಿಕರಿಗಾಗಿ ಗೃಹ ಭಾಗ್ಯ ಯೋಜನೆ ಜಾರಿಗೆ ತಂದಿದ್ದು, ಅಮೃತ್ ಯೋಜನೆಯಡಿ ಈ ವರ್ಷ 1258 ಕೋಟಿ ವೆಚ್ಚದ ಕ್ರಿಯಾ ಯೋಜೆನಗೆ ಅನುಮೋದನೆ ನೀಡಲಾಗಿದೆ. ಘನತ್ಯಾಜ್ಯ ನಿರ್ವಹಣೆಗೆ ಕಳೆದ ಸಾಲಿನಲ್ಲಿ 51.82 ಕೋಟಿ ಹಾಗೂ ಈ ಸಾಲಿನಲ್ಲಿ 75 ಕೋಟಿ ಬಿಡುಗಡೆ ಮಾಡಲಾಗಿದೆ. ಆರ್ ಎಐ ಯೋಜನಡಯಡಿ ರಾಜ್ಯದ 10 ನಗರಗಳ 103 ಕೊಳಚೆ ಪ್ರದೇಶದಲ್ಲಿ 22133 ಮೆನಗೆ ನೀರ್ಮಾಣಕ್ಕೆ 1129.27 ಕೋಟಿ ವೆಚ್ಚದ ಯೋಜನೆ ಪ್ರಗತಿಯಲ್ಲಿದೆ. ಹೌಸಿಂಗ್ ಫಾರ್ ಆಲ್ 2022 ಯೊಜನೆಯಡಿ 15 ನಗರಗಳ 98 ಕೊಳಚೆ ಪ್ರದೇಶಗಳಲ್ಲಿ 16522 ಮನೆ ನಿರ್ಮಿಸಲು 892.10 ಕೋಟಿ ವೆಚ್ಚದ 21 ಯೋಜನೆಗಳನ್ನು ಅನುಮೋದಿಸಲಾಗಿದೆ ಎಂದರು.
ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯ ಈ ಸಾಲಿನ ಕ್ರೀಯಾಯೋಜನೆಯನ್ನು ರೂ 573.17 ಕೋಟಿಗೆ ತಯಾರಿಸಿದ್ದು, 87 ಯೋಜನೆಗಳಲ್ಲಿ 34 ಕುಡಿಯುವ ನೀರಿನ ಯೋಜನೆ ಮತ್ತು 53 ಒಳಚರಂಡಿ ಯೋಜನೆ ಆಗಿರುತ್ತದೆ. ಕಳೆದ ಮೂರು ವರ್ಷಗಳಲ್ಲಿ ಮಂಡಳಿಯುಗು ರೂ 719 ಕೋಟಿ ವೆಚ್ಚದಲ್ಲಿ 23 ನೀರು ಸರಬರಾಜು ಯೋಜನೆ ಮತ್ತು ರೂ 146 ಕೋಟಿ ವೆಚ್ಚದಲ್ಲಿ 10 ಒಳಚರಂಡಿ ಯೋಜನೆಯನ್ನು ಚಾಲ್ತಿಗೊಳಿಸಲಾಗಿದೆ. ಜೆಎನ್ ನರ್ಮ್ ಯೋಜನಡಯಡಿ ಮೈಸೂರು ನಗರದ ಕುಡಿಯುವ ನೀರಿನ ಯೋಜನೆಗೆ ರೂ 179 ಕೋಟಿ ವೆಚ್ಚ ಮಾಡಲಾಗಿದ್ದು, ರೂ 108.81 ಕೋಟಿ ವೆಚ್ಚದಲ್ಲಿ ಕಬಿನಿ ನೀರು ಸರಬರಾಜು ಯೋಜನೆ ಚಾಲ್ತಿಗೊಳಿಸಲಾಗಿದೆ. ರಾಜ್ಯಕ್ಕೆ 6 ಸ್ಮಾರ್ಟ್ ಸಿಟಿಗಳ ಅಭಿವೃದ್ಧಿಗೆ ಅನುಮತಿ ಲಭಿಸಿದ್ದು, ದಾವಣಗೆರೆ ಮತ್ತು ಬೆಳಗಾವಿ ಮೊದಲ ಹಂತದಲ್ಲಿಯೇ ಆಯ್ಕೆಯಾಗಿವೆ. ಹುಬ್ಬಳ್ಳಿ ಧಾರವಾಡ ತ್ವರಿತ ಬಸ್ ಸಾರಿಗೆ ಯೋಜನೆಯ ಜಾರಿಗಾಗಿ ಸರ್ಕರ ಕಳೆದ ಸಾಲಿನಲ್ಲಿ 200 ಕೋಟಿ ಮತ್ತು ಈ ಸಾಲಿನಲ್ಲಿ 150 ಕೋಟಿ ಕಾಯ್ದಿರಿಸಿದೆ ಎಂದರು.

ಜಿಲ್ಲೆಯ ಸಾಧನೆಯ ಬಗ್ಗೆ ವಿವರ ನೀಡಿದ ಸಚಿವರು ಕೃಷಿ ಇಲಾಖೆಯ ಭೂ ಸಮೃದ್ಧಿ ಯೋಜೆನಯಡಿ 225.38 ಲಕ್ಷ ಅನುದಾನ ನೀಡಿದ್ದು, ಲೋಕೊಪಯೋಗಿ ಇಲಾಖೆ 321.27 ಕೋಟಿ ವೆಚ್ಚದ ಕಾಮಾಗಾರಿ ನಡೆಸಲಾಗಿದೆ. ಜಿಲ್ಲೆಯಲ್ಲಿ 133697 ಬಿಪಿಎಲ್ ಕಾರ್ಡುಗಳನ್ನು ಹಂಚಾಲಾಗಿದೆ. ಜಿಲ್ಲೆಯ ಪ್ರಮುಖ 5 ಕಡಲ ತೀರ ಅಭಿವೃದ್ಧಿಗೆ 9.13 ಕೋಟಿ ಅನುದಾನ ಮೀಸಲರಿಸಿದೆ ಕೋಟಿ ಅನುದಾವನ್ನು ಕಾಯ್ದಿರಿಸಲಾಗಿದೆ. ಯುವಜನ ಕ್ರೀಡಾ ಇಲಾಖೆಯ ಮುಲಕ ಜಿಲ್ಲೆಯಲ್ಲಿ ರೂ 3.64 ಕೋಟಿಯ ಸಿಂಥೆಟಿಕ್ ಟ್ರ್ಯಾಕ್ ನಿಋರ್ಆಣ, ಕ್ರೀಡಾ ವಸತಿ ನಿಲಯನಿರ್ಮಾಣ, ಒಳಾಂಗಣ ಕ್ರೀಡಾಂಗಣ ಅಭಿವೃದ್ದಿ ನಡೆಸಲಾಗಿದ. ಕಾಪುವನ್ನು ಪುರಸಭೆಯನ್ನಾಗಿ ಉನ್ನತಿಗೇರಿಸಿ ಉತ್ತಮ ಮೂಲಭೂತ ಸೌಕರ್ಯ ನೀಡಲು 15 ಕೋಟಿ, 3 ಕೋಟಿ ವಿಶೇಷ ಅನುದನಾ, ಕುಡಿಯುವ ನೀರಿಗೆ ರೂ 83 ಲಕ್ಷರೂಗಳ ಅನುದಾನ ಬಿಡುಗಡೆ ಮಾಡಲಾಗಿದೆ. ಜಿಲ್ಲೆಯಲ್ಲಿ ಕಂದಾಯ ಅದಾ¯ತ್ ನಡೆಸಿ 29723 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಸಕಾಲದಲ್ಲಿ ಉಡುಪಿ ಜಿಲ್ಲೆಯ ಪ್ರಥಮ ಸ್ಥಾನದಲ್ಲಿದ್ದು, ಆಧಾರ್ ಯೋಜನೆಯಡಿ 1154533 ನಾಗರೀಕರ ನೊಂದಣಿಯಾಗಿದೆ ಎಂದರು.


Spread the love