ಜನಾರ್ದನ ಪೂಜಾರಿ ಆರೋಗ್ಯ ವಿಚಾರಿಸಿ ಆಶೀರ್ವಾದ ಪಡೆದ ಸಂಸದ ನಳಿನ್ ಕುಮಾರ್

Spread the love

ಜನಾರ್ದನ ಪೂಜಾರಿ ಆರೋಗ್ಯ ವಿಚಾರಿಸಿ ಆಶೀರ್ವಾದ ಪಡೆದ ಸಂಸದ ನಳಿನ್ ಕುಮಾರ್

ಮಂಗಳೂರು: ಕಾಂಗ್ರೆಸಿನ ಹಿರಿಯ ನಾಯಕ ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿಯವರಿಗೆ ಕಾಡುತ್ತಿರುವ ಅನಾರೊಗ್ಯದ ಪರಿಣಾಮ ಸದ್ಯ ರಾಜಕೀಯ ಚಟುವಟಿಕೆಯಿಂದ ದೂರ ಇದ್ದು, ಬಿಸಿ ರೋಡಿನಲ್ಲಿನ ತಮ್ಮ ನಿವಾಸದಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಭಾನುವಾರ ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಅವರ ಆರೋಗ್ಯ ವಿಚಾರಣೆ ಮಾಡಿ ಆಶೀರ್ವಾದ ಪಡೆದುಕೊಂಡರು.


ಭಾನುವಾರ ಪೊಳಲಿ ಕ್ಷೇತ್ರಕ್ಕೆ ಬಿಲ್ಲವ ಸಮಾಜದಿಂದ ಸೇವಾರೂಪವಾಗಿ ಸಮರ್ಪಿಸಲಿದ್ದ ಧ್ವಜಸ್ತಂಭದ ಮೆರವಣಿಗೆ ಚಾಲನೆ ನೀಡಲು ಬ್ರಹ್ಮಶ್ರೀ ನಾರಾಯಣಗುರು ವೃತ್ತದ ಬಳಿ ಬಂದಿದ್ದ ಜನಾರ್ದನ ಪೂಜಾರಿಯವರನ್ನು ಸಂಸದ ನಳಿನ್ ಕಾರಿನ ಸಮೀಪದಿಂದ ಕೈ ಹಿಡಿದುಕೊಂಡು ವೃತ್ತದತ್ತ ಕರೆದುಕೊಂಡು ಬಂದರು.

ಇದೇ ವೇಳೆ ಕೆಲ ಸಮಯ ಪೂಜಾರಿಯವರ ಜತೆ ಕುಳಿತು ಆರೋಗ್ಯವನ್ನು ವಿಚಾರಿಸುವುದರೊಂದಿಗೆ ಅವರ ಆಶೀರ್ವಾದ ಪಡೆದರು.

ಈ ವೇಳೆ ಬಿಲ್ಲವ ನಾಯಕರಾದ ಹರಿಕೃಷ್ಣ ಬಂಟ್ವಾಳ, ರಾಜೇಶ್ ನಾಯ್ಕ ಉಳಿಪ್ಪಾಡಿಗುತ್ತು, ಮಾಜಿ ಶಾಸಕ ರುಕ್ಮಯ ಪೂಜಾರಿ ಮತ್ತಿತರಿದ್ದರು.


Spread the love