ಜನಾರ್ದನ ಪೂಜಾರಿ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ನಳಿನ್​ ಕುಮಾರ್​ ಕಟೀಲ್​

Spread the love

ಜನಾರ್ದನ ಪೂಜಾರಿ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ನಳಿನ್​ ಕುಮಾರ್​ ಕಟೀಲ್​

ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಳಿನ್​ ಕುಮಾರ್ ಕಟೀಲ್​ ಅವರು ಇಂದು ಕಾಂಗ್ರೆಸ್​ ನಾಯಕ ಬಿ.ಜನಾರ್ದನ ಪೂಜಾರಿಯವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದರು.

ನಳಿನ್ ಅವರು ತಮ್ಮ ಬೆಂಬಲಿಗರೊಂದಿಗೆ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಈ ವೇಳೆ ಅಲ್ಲಿ ಜನಾರ್ದನ ಪೂಜಾರಿ ಕೂಡ ಆಗಮಿಸಿದ್ದರು. ಇವರಿಬ್ಬರೂ ಮಾತುಕತೆ ನಡೆಸಿದ ಬಳಿಕ ನಳಿನ್​, ಜನಾರ್ದನ್​ ಪೂಜಾರಿಯವರ ಕಾಲಿಗೆರಗಿ ಆಶೀರ್ವಾದ ಪಡೆದಿದ್ದಾರೆ.


Spread the love