ಜಯಂಟ್ಸ್ ಗ್ರೂಪ್   ಉಡುಪಿ ವತಿಯಿಂದ ಮೂಳೆ ಸಾಂದ್ರತೆ ತಪಾಸಣಾ ಕಾರ್ಯಕ್ರಮ

ಜಯಂಟ್ಸ್ ಗ್ರೂಪ್   ಉಡುಪಿ ವತಿಯಿಂದ ಮೂಳೆ ಸಾಂದ್ರತೆ ತಪಾಸಣಾ ಕಾರ್ಯಕ್ರಮ

ಉಡುಪಿ: ಜಯಂಟ್ಸ್ ಗ್ರೂಪ್   ಉಡುಪಿ ವತಿಯಿಂದ ಸಾಯಿರಾಧ ಪ್ರೈಡ್ ಅಪಾರ್ಟ್ಮೆಂಟ್ ಎಸೋಸಿಯೇಶನ್ ನ ಕಛೇರಿಯಲ್ಲಿ ಮೂಳೆ ಸಾಂದ್ರತಾ ತಪಸಣಾ ಕಾರ್ಯಕ್ರಮ ಜರುಗಿತು.

ಕಾರ್ಯಕ್ರಮವನ್ನು ಜಯಂಟ್ಸ್ ಸೆಂಟ್ರಲ್ ಕಮಿಟಿ ಸದಸ್ಯರೂ ಅಪಾರ್ಟ್ಮೆಂಟ್ ಅಸೋಸಿಯೇಷನ್ ಕಾರ್ಯದರ್ಶಿಯೂ ಆದ ದಿನಕರ್ ಅಮೀನ್ ಮತ್ತು ಅಪಾರ್ಟ್ಮೆಂಟ್ ಎಸೋಸಿಯೇಶನ್ ನ ಅಧ್ಯಕ್ಷ ಅಶೋಕ್ ರಾಜ್ ಶೆಟ್ಟಿ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು

ಜಯಂಟ್ಸ್ ಯುನಿಟ್ ಡೈರೆಕ್ಟರ್ ಜ| ರಮೇಶ್ ಪೂಜಾರಿ, ಜಯಂಟ್ಸ್ ಉಡುಪಿ ಅಧ್ಯಕ್ಷ ಜ| ಲಕ್ಷ್ಮೀಕಾಂತ್ ಬೆಸ್ಕೂರ್ , ಉಪಾಧ್ಯಕ್ಷ ಜ| ಇಕ್ಬಾಲ್ ಮನ್ನಾ, ಪೂರ್ವಾಧ್ಯಕ್ಷರುಗಳಾದ ಜ| ಉಷಾ ರಮೇಶ್, ಜಯಂಟ್ಸ್ ಡಿ.ಎ. ಜ| ಯಶವಂತ್ ಮತ್ತು ಜಯಂಟ್ಸ್ ಸದಸ್ಯರು, ಅಪಾರ್ಟ್ಮೆಂಟ್ ಅಸೋಸಿಯೇಷನ್ ನ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸುಮಾರು 450 ನಿವಾಸಿಗಳು ಈ ಕಾರ್ಯಕ್ರಮದ ಪ್ರಯೋಜನವನ್ನು ಪಡೆದರು.