ಜಾತಿ ನಿಂದನೆ ಮಾಡಿದ ಆರೋಪ ವ್ಯಕ್ತಿಯ ಬಂಧನ

ಜಾತಿ ನಿಂದನೆ ಮಾಡಿದ ಆರೋಪ ವ್ಯಕ್ತಿಯ ಬಂಧನ

ಪುತ್ತೂರು: ಜಾತಿ ನಿಂದನೆ ಮಾಡಿದ ಆರೋಪದ ಮೇಲೆ ವ್ಯಕ್ತಿಯೋರ್ವರನ್ನು ಪುತ್ತೂರು ಪೊಲೀಸರು ಬಂಧಿಸಿದ್ದಾರೆ.

ಬಂಧಿತತನ್ನು ಅರಿಯಡ್ಕ ನಿವಾಸಿ ಸಂದೇಶ್ ಕುಮಾರ್ (47) ಎಂದು ಗುರುತಿಸಲಾಗಿದೆ.

ಮೇ 20 ರಂದು ಸಂದೇಶ್ ಕುಮಾರ್ ಎನ್ನುವವರು ದಲಿತ ಸಮುದಾಯವನ್ನು ಅವಮಾನಿಸಿದ್ದು ಈ ಕುರಿತು ಪುತ್ತೂರು ತಾಲ್ಲೂಕು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಅರಿಯಡ್ಕ ಗ್ರಾಮ ಸಮಿತಿ ಸಂಚಾಲಕರಾದ ನಾರಾಯಣ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಅದರಂತೆ ಪೊಲೀಸರು ಬಂಧಿಸಿದ್ದಾರೆ.

ಪುತ್ತೂರು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.