ಜೂನಿಯರ್‌ ಹ್ಯಾಂಡ್‌ ಬಾಲ್‌ ಚಾಂಪಿಯನ್‌ ಶಿಪ್‌ – ಮಂಡ್ಯ, ಕೊಡಗಿಗೆ ಪ್ರಶಸ್ತಿ

Spread the love

ಜೂನಿಯರ್‌ ಹ್ಯಾಂಡ್‌ ಬಾಲ್‌ ಚಾಂಪಿಯನ್‌ ಶಿಪ್‌ – ಮಂಡ್ಯ, ಕೊಡಗಿಗೆ ಪ್ರಶಸ್ತಿ

ಉಡುಪಿ: ಇಲ್ಲಿನ ಬೀಡಿನಗುಡ್ಡೆಯ ಮಹಾತ್ಮಗಾಂಧಿ ಬಯಲುರಂಗಮಂದಿರ ಮೈದಾನದಲ್ಲಿ ನಡೆದ ಮೂರು ದಿನಗಳು 17ನೇ ಕರ್ನಾಟಕ ರಾಜ್ಯ ಜೂನಿಯರ್‌ ಹ್ಯಾಂಡ್‌ ಬಾಲ್‌ ಚಾಂಪಿಯನ್‌ ಶಿಪ್‌ ಟೂರ್ನಿಯಲ್ಲಿ ಮಂಡ್ಯದ ಬಾಲಕರ ತಂಡ ಹಾಗೂ ಕೊಡಗಿನ ಕೆಎಲ್‌ಇ ಬಾಲಕಿಯರ ತಂಡ ಪ್ರಶಸ್ತಿ ಗೆದ್ದುಗೊಂಡಿದೆ.

ಉಡುಪಿ ಜಿಲ್ಲಾ ಹ್ಯಾಂಡ್ ಬಾಲ್ ಅಸೋಸಿಯೇಶನ್ ಹಾಗೂಕರ್ನಾಟಕ ರಾಜ್ಯ ಹ್ಯಾಂಡ್ ಬಾಲ್ಅ ಸೋಸಿಯೇಶನ್ ಸಂಯುಕ್ತ ಆಶ್ರಯದಲ್ಲಿ ಹ್ಯಾಂಡ್‌ಬಾಲ್‌ ಟೂರ್ನಿ ನಡೆಯಿತು.

ಬಾಲಕರ ವಿಭಾಗದಲ್ಲಿ ಉಡುಪಿ ದ್ವಿತೀಯ, ಎಎಚ್ಇ ಮೈಸೂರು ತಂಡ ತೃತೀಯ ಹಾಗೂ ಬಾಲಕಿಯರ ವಿಭಾಗದಲ್ಲಿ ಗೋಕಾಕ್‌ ದ್ವಿತೀಯ, ಬಿಎಂಎಸ್ ಸಿ ಬೆಂಗಳೂರು ತೃತೀಯ ಸ್ಥಾನ ಪಡೆದುಕೊಂಡಿದೆ. ಭಾನುವಾರ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಲಾಯಿತು. ಅಸೋಸಿಯೇಶನ್‌ ಗೌರವ ಕಾರ್ಯದರ್ಶಿ ಎಂ.ಕೆ. ನಾಗೇಂದ್ರ ಅವರನ್ನು ಗೌರವಿಸಲಾಯಿತು.

ಉಡುಪಿ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಎಸ್. ಮಧುಕರ್‌, ಅಸೋಸಿಯೇಶನ್‌ನ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ, ಉಪ ಕಾರ್ಯದರ್ಶಿ ಬಿ.ಎಲ್. ಲೋಕೇಶ್‌, ಉದ್ಯಮಿ ಕಿಶನ್ ಹೆಗ್ಡೆ ಕೊಳ್ಕೆಬೈಲ್, ನಗರಸಭಾ ಸದಸ್ಯ ರಮೇಶ್‌ ಕಾಂಚನ್‌, ಮಾಜಿ ಜಿಲ್ಲಾಪಂಚಾಯಿತಿ ಮಾಜಿ ಸದಸ್ಯ ದಿವಾಕರ ಕುಂದರ್‌ ಮುಖ್ಯ ಅತಿಥಿಗಳಾಗಿದ್ದರು.

ಉಡುಪಿ ಜಿಲ್ಲಾ ಹ್ಯಾಂಡ್‌ಬಾಲ್‌ ಅಸೋಸಿಯೇಶನ್‌ ಅಧ್ಯಕ್ಷ ಅಲೆವೂರು ಹರೀಶ್‌ ಕಿಣಿ ಅಧ್ಯಕ್ಷತೆ ವಹಿಸಿದ್ದರು.ಇಂದು ರಮಾನಂದ ಭಟ್, ಅಸೋಸಿಯೇಶನ್ ಜಿಲ್ಲಾ ಕಾರ್ಯದರ್ಶಿ ಸೀತಾರಾಮ ಗೌಡ, ಕೋಶಾಧಿಕಾರಿ ನಿರುಪಮಾ ಪ್ರಸಾದ್‌ ಶೆಟ್ಟಿ , ಸಂಘಟನಾ ಕಾರ್ಯದರ್ಶಿ ರೋಹಿತ್‌ ಆರ್. ದೇವಾಡಿಗ, ಉಪಾಧ್ಯಕ್ಷ ಸುದರ್ಶನ್‌ ನಾಯಕ್‌ , ಗೋಪಾಲ ಶೆಟ್ಟಿ ಮಲ್ಪೆ ಇದ್ದರು.


Spread the love