ಜೋಕಟ್ಟೆ : ಕೊಲೆಯತ್ನ ಪ್ರಕರಣ ; ಇಬ್ಬರು ಆರೋಪಿಗಳು ಸೆರೆ

ಜೋಕಟ್ಟೆ : ಕೊಲೆಯತ್ನ ಪ್ರಕರಣ ; ಇಬ್ಬರು ಆರೋಪಿಗಳು ಸೆರೆ

ಮಂಗಳೂರು : ಪಣಂಬೂರು ಪೊಲೀಸ್ ಠಾಣೆ ವ್ಯಾಪ್ತಿಯ ಜೋಕಟ್ಟೆ – ಜತ್ತಬೆಟ್ಟು ಎಂಬಲ್ಲಿ ನಡೆದಿದ್ದ ಕೊಲೆಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ರೌಡಿ ನಿಗ್ರಹ ದಳ ಮತ್ತು ಪಣಂಬೂರು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ.

ಬಂಧಿತರನ್ನು ಬಜ್ಪೆ ಕಳವಾರು ನಿವಾಸಿಗಳಾದ ಪ್ರಶಾಂತ್ (25) ಹಾಗೂ ಮೇಘರಾಜ್ (18) ಎಂದು ಗುರುತಿಸಲಾಗಿದೆ.

ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಬೈಕ್ ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಮಂಗಳೂರು ಉತ್ತರ ಉಪವಿಭಾಗದ ರೌಡಿ ನಿಗ್ರಹ ದಳಕ್ಕೆ ದೊರೆತ ಖಚಿತ ಮಾಹಿತಿ ಮೇರೆಗೆ ಪಣಂಬೂರು ಪೊಲೀಸ್‌ ಇನ್‌ಸ್ಪೆಕ್ಟರ್‌ ಅಜ್ಮತ್ ಅಲಿ, ಎಸ್‌ಐ ಉಮೇಶ್ ಕುಮಾರ್ ಮತ್ತು ಅಪರಾಧ ಪತ್ತೆ ದಳದ ಮೊಹಮ್ಮದ್ ಎಎಸ್‍ಐ, ಕುಶಲ ಮಣಿಯಾಣಿ, ಸತೀಶ್ ಎಂ. ವಿಜಯ ಕಾಂಚನ್, ಇಸಾಕ್ , ಶರಣ್ ಕಾಳಿ ಕಾರ್ಯಾಚರಣೆ ನಡೆಸಿದ್ದರು.

Leave a Reply

  Subscribe  
Notify of