ಜೋಡಿ ಕೊಲೆ ಪ್ರಕರಣ; ಮತ್ತೋರ್ವ ಆರೋಪಿಯ ಬಂಧನ

Spread the love

ಜೋಡಿ ಕೊಲೆ ಪ್ರಕರಣ; ಮತ್ತೋರ್ವ ಆರೋಪಿಯ ಬಂಧನ

ಮಂಗಳೂರು: ಕಳೆದ ತಿಂಗಳು ಫರಂಗಿಪೇಟೆಯಲ್ಲಿ ನಡೆದ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಇನ್ನೋರ್ವ ಆರೋಪಿಯನ್ನು ಮಂಗಳೂರು ಡಿಸಿಐಬಿ ಪೋಲಿಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಅಡ್ಯಾನ್ ನಿವಾಸಿ ಇಮ್ರಾನ್ ಯಾನೆ ಪಲ್ಟಿ ಇಮ್ರಾನ್ ಎಂದು ಗುರುತಿಸಲಾಗಿದೆ.

ಡಿಸಿಐಬಿ ಇನ್ಸ್ ಪೆಕ್ಟರ್ ಅಮಾನುಲ್ಲಾ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಬಂಧಿಸಿದ್ದು, ಈ ವರೆಗೆ ಜೋಡಿಕೊಲೆ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 12 ಕ್ಕೆ ಏರಿದೆ.. ಮುಂದಿನ ತನಿಖೆಗಾಗಿ ಬಂಟ್ವಾಳ ಎಎಸ್ಪಿ ಡಾ ಅರುಣ್ ಅವರಿಗೆ ಆರೋಪಿಯನ್ನು ಡಿಸಿಐಬಿ ಹಸ್ತಾಂತರಿಸಿದ್ದಾರೆ.


Spread the love