ಡಾಂಬರ್ ಕಳ್ಳತನದ ಆರೋಪಿಗಳನ್ನು ಬಂಧಿಸಿದ ಪೊಲೀಸರು

Spread the love

ಡಾಂಬರ್ ಕಳ್ಳತನದ ಆರೋಪಿಗಳನ್ನು ಬಂಧಿಸಿದ ಪೊಲೀಸರು

ಮಂಗಳೂರು: ಡಾಂಬರ್ ಕಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಬಂಟ್ವಾಳ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತರನ್ನು ಪುತ್ತೂರು ನೆಕ್ಕಿಲಾಡಿ ನಿವಾಸಿ ಉಮ್ಮರುಲ್ ಫಾರೂಕ್ (24) ಮತ್ತು ಮಹಮ್ಮದ್ ಅಶ್ರಫ್ (24) ಎಂದು ಗುರುತಿಸಲಾಗಿದೆ.

2017ರ ನವೆಂಬರ್ ತಿಂಗಳಿನಲ್ಲಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಸಜಿಪನಡು ಗ್ರಾಮದ ಕಂಚಿನಡ್ಕ ಬಳಿ ಡಾಂಬರ್ ಕಳವು ಮಾಡಿದ ಬಗ್ಗೆ ಪ್ರಕರಣ ದಾಖಲಾಗಿತ್ತು. ಅದರಂತೆ ತನಿಖೆ ಆರಂಭಿಸಿದ ಪೊಲೀಸರು ಪ್ರಕರಣದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಸದ್ರಿ ಡಾಂಬರ್ ಕಳ್ಳತನಪ್ರಕರಣ ಪತ್ತೆಯಾಗಿರುತ್ತದೆ.ಸದ್ರಿ ಪ್ರಕರಣಕ್ಕೆ ಸಂಬಂದಿಸಿದಂತೆ ಒಟ್ಟು 43 ಬ್ಯಾರೆಲ್ ಡಾಂಬರ್ ವಶಪಡಿಸಿಕೊಂಡಿದ್ದು ಸೊತ್ತುಗಳ ಒಟ್ಟು ಮೌಲ್ಯ ಸುಮಾರು 3 ಲಕ್ಷ ರೂ ಹಾಗೂ ಈ ಪ್ರಕರಣದಲ್ಲಿ ಡಾಂಬರ್ ಕದಿಯಲು ಉಪಯೋಗಿಸಿದ ಲಾರಿಯನ್ನು ವಶಪಡಿಸಿಕೊಂಡಿರುತ್ತಾರೆ.ಸದ್ರಿ ಪ್ರಕರಣದಲ್ಲಿ ಇನ್ನೂ 3 ಜನ ಆರೋಪಿಗಳು ತಲೆಮರಿಸಿಕೊಂಡಿದ್ದು ಪತ್ತೆಗೆ ಪ್ರಯತ್ನ ಮುಂದುವರಿದಿರುತ್ತದೆ.

ಈ ಪ್ರಕರಣದಲ್ಲಿ ಪತ್ತೆ ಹಚ್ಚುವಲ್ಲಿ ಪೊಲೀಸು ಅಧೀಕ್ಷಕರಾದ ಡಾ|| ರವಿಕಾಂತೇಗೌಡ ನಿರ್ದೇಶನ, ಹೆಚ್ಚುವರಿ ಪೊಲೀಸು ಅಧೀಕ್ಷಕರಾದ ಸಜಿತ್ ವಿ ಜೆ ಹಾಗೂ ಬಂಟ್ವಾಳ ಉಪ ವಿಭಾಗ ಸಹಾಯಕ ಪೊಲಿಸು ಅಧೀಕ್ಷಕರಾದ ಋಷಿಕೇಶ್ ಭಗವಾನ್ ಸೋನಾವಣೆರವರ ಮಾರ್ಗದರ್ಶನದಲ್ಲಿ, ಪೊಲೀಸು ವೃತ್ತ ನಿರೀಕ್ಷಕರಾದ ಟಿ .ಡಿ. ನಾಗರಾಜ್ ಮತ್ತು ಬಂಟ್ವಾಳ ಗ್ರಾಮಾಂತರ ಪೊಲೀಸು ಠಾಣಾ ಪೊಲೀಸು ಉಪ ನಿರೀಕ್ಷರಾದ ಪ್ರಸನ್ನ ಎಂ,ಎಸ್, ಬಂಟ್ವಾಳ ನಗರ ಠಾಣಾ ಅಪರಾಧ ವಿಭಾಗದ ಪೊಲೀಸು ಉಪ ನಿರೀಕ್ಷಕರಾದ ಹರೀಶ್ ಎಮ್ ,ಆರ್ ,ಅಪರಾಧ ಸಿಬ್ಬಂದಿಗಳಾದ ಹೆಚ್ ಸಿಗಳಾದ ಗಿರೀಶ್ ,ಜಯರಾಂ, ಸುರೇಶ್,ಪಿಸಿಗಳಾದ ನಝಿರ್ ಸತೀಶ್ ಆದರ್ಶ್,ಬಸವರಾಜ್, ರಂಜಾನ್, ಕುಮಾರ್, ವಿವೇಕ್,ರವರು ಈ ಪ್ರಕರಣವನ್ನು ಭೇದಿಸಲು ಯಶಸ್ವಿಯಾಗಿದ್ದಾರೆ .


Spread the love