ಡಿಕೆಶಿ ಗೆ ಅವರಿಗೆ ಬಿಜೆಪಿಗಿಂತ ಸಿದ್ಧರಾಮಯ್ಯ ಅವರ ಕಾಟವೇ ಹೆಚ್ಚಾಗಿದೆ – ಸಚಿವ ಆರ್ ಅಶೋಕ್

Spread the love

ಡಿಕೆಶಿ ಗೆ ಅವರಿಗೆ ಬಿಜೆಪಿಗಿಂತ ಸಿದ್ಧರಾಮಯ್ಯ ಅವರ ಕಾಟವೇ ಹೆಚ್ಚಾಗಿದೆ – ಸಚಿವ ಆರ್ ಅಶೋಕ್

ಉಡುಪಿ: ಡಿ.ಕೆ ಶಿವಕುಮಾರ್ ಅವರಿಗೆ ಬಿಜೆಪಿಗಿಂತ ಸಿದ್ಧರಾಮಯ್ಯ ಅವರ ಕಾಟವೇ ಹೆಚ್ಚಾಗಿದ್ದು ಡಿಕೆಶಿ ಮೊದಲು ಸಿದ್ದರಾಮಯ್ಯ ಅವರ ಕಾಟದಿಂದ ಮೊದಲು ತಪ್ಪಿಸಿಕೊಂಡು ಹೊರಬರಲಿ ಬಳಿಕ ಸರಕಾರದ ವಿರುದ್ಧ ಟೀಕೆ ಮಾಡಲಿ ಎಂದು ಕಂದಾಯ ಸಚಿವ ಸಚಿವ ಆರ್ ಅಶೋಕ್ ಅವರು ವ್ಯಂಗ್ಯವಾಡಿದ್ದಾರೆ.

ಅವರು ಶುಕ್ರವಾರ ಉಡುಪಿಯಲ್ಲಿ ಸರಕಾರ ಇದೆಯೋ ಇಲ್ಲವೋ ಎಂಬ ವಿಪಕ್ಷ ನಾಯಕರ ಪ್ರಶ್ನೆಗೆ ಅಶೋಕ್ ಮಾಧ್ಯಮಗಳೊಂದಿಗೆ ಪ್ರತಿಕ್ರಿಸಿ ರಾಜ್ಯದಲ್ಲಿ ವಿರೋಧ ಪಕ್ಷ ಇದೆಯೋ ಇಲ್ಲವೋ ಗೊತ್ತಿಲ್ಲ ಸಿದ್ಧರಾಮಯ್ಯನವರೂ ಕೊರೋನಾದಿಂದ ಆಸ್ಪತ್ರೆಯಲ್ಲಿದ್ದಾರೆ. ಡಿ ಕೆ ಶಿವಕುಮಾರ್ ಇನ್ನೂ ಕೂಡ ಪದಗ್ರಹಣ ,ಸನ್ಮಾನದ ಗುಂಗಿನಲ್ಲಿದ್ದಾರೆ. ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದರೂ ಕೂಡ ಅವರಿನ್ನೂ ಫೀಲ್ಡಿಗೇ ಇಳಿದಿಲ್ಲ ಎಂದು ವ್ಯಂಗ್ಯವಾಡಿದರು.

ನಮ್ ಸಿಎಂ ಅಷ್ಟು ವಯಸ್ಸಾದ್ರೂ ಎಷ್ಟೊಂದು ಕ್ರಿಯಾಶೀಲರಾಗಿದ್ದಾರೆ ವಿಪಕ್ಷದವರು ಕಾಮಾಲೆ ಕಣ್ಣಿಂದ ನೋಡಿದರೆ ನಮ್ಮ ಕೆಲಸ ಕಾಣಲ್ಲ ಸರಕಾರ ಎಲ್ಲದಕ್ಕೂ ಉತ್ತರ ಕೊಡಲು ಸಿದ್ಧವಿದೆ ಎಂದು ಹೇಳಿದರು.


Spread the love