ಡಿಜೆ ಹಳ್ಳಿ ಗಲಭೆ, ಡ್ರಗ್ಸ್ ಪ್ರಕರಣ ; ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ

Spread the love

ಡಿಜೆ ಹಳ್ಳಿ ಗಲಭೆ, ಡ್ರಗ್ಸ್ ಪ್ರಕರಣ ; ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ

ಬೆಂಗಳೂರು: ಡಿಜೆ ಹಳ್ಳಿ ಗಲಭೆ ಹಾಗೂ ಡ್ರಗ್ಸ್ ಜಾಲ ಪ್ರಕರಣದ ಆರೋಪಿಗಳನ್ನು ಬಿಡುಗಡೆ ಮಾಡಬೇಕೆಂದು ಬೇಡಿಕೆ ಇಟ್ಟು ಅಪರಿಚಿತನೊಬ್ಬ ಬಾಂಬ್ ಬೆದರಿಕೆ ಹಾಕಿದ್ದು, ಈ ಸಂಬಂಧ ಹಲಸೂರು ಗೇಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಎರಡೂ ಪ್ರಕರಣಗಳನ್ನು ಉಲ್ಲೇಖಿಸಿ ಬೆದರಿಕೆ ಪತ್ರ ಬಂದಿದ್ದು ಈ ಸಂಬಂಧ ಎಫ್ ಐ ಆರ್ ದಾಖಲಿಸಲಾಗಿದ್ದು, ತನಿಖೆ ಆರಂಭಿಸಲಾಗಿದೆ. ಪ್ರಕರಣದ ಬಗ್ಗೆ ಹೆಚ್ಚು ಮಾಹಿತಿ ಸದ್ಯಕ್ಕೆ ಬಹಿರಂಗ ಪಡಿಸಲಾಗದು ಎಂದು ಸಿಸಿಬಿ ಜಂಟಿ ಕಮೀಷನರ್ ಸಂಜೀವ್ ಪಾಟೀಲ್ ತಿಳಿಸಿದ್ದಾರೆ.

ಪೊಲೀಸ್ ಕಮೀಷನರ್ ಕಚೇರಿ ಹಾಗೂ ನ್ಯಾಯಾಲಯಕ್ಕೆ ಬೆದರಿಕೆ ಪತ್ರ ಬಂದದ್ದು, ಡಿಜೆ ಹಳ್ಳಿ ಗಲಭೇ ಹಾಗೂ ಡ್ರಗ್ಸ್ ಜಾಲ ಪ್ರಕರಣದ ಆರೋಪಿಗಳು ಅಮಾಯಕರು ಅವರನ್ನು ಕೂಡಲೇ ಬಿಡುಗಡೆ ಮಾಡಿ ಇಲ್ಲದಿದ್ದರೆ ಬಾಂಬ್ ಇಡುತ್ತೇವೆ ಎಂದು ಪತ್ರದಲ್ಲಿ ಬರೆದಿರುವುದಾಗಿ ತಿಳಿದು ಬಂದಿದೆ.


Spread the love