ಡಿ 7 : ಸಾಸ್ತಾನ ಟೋಲ್ ಗೇಟ್ ವಿರುದ್ದ ಹೋರಾಟಕ್ಕೆ 70ಕ್ಕೂ ಅಧಿಕ ಸಂಘಟನೆಗಳ ಬೆಂಬಲ

Spread the love

ಡಿ 7 : ಸಾಸ್ತಾನ ಟೋಲ್ ಗೇಟ್ ವಿರುದ್ದ ಹೋರಾಟಕ್ಕೆ 70ಕ್ಕೂ ಅಧಿಕ ಸಂಘಟನೆಗಳ ಬೆಂಬಲ

ಉಡುಪಿ: ಡಿಸೆಂಬರ್ 7ರಂದು ಸಾಸ್ತಾನ ಟೋಲ್ಗೇಟ್ ವಿರುದ್ಧ ನಡೆಯುವ ಹೋರಾಟಕ್ಕೆ ಜಿಲ್ಲೆಯ 70 ಕ್ಕೂ ಅಧಿಕ ಸಂಘ ಸಂಸ್ಥೆಗಳು ಬೆಂಬಲಿಸುವುದರೊಂದಿಗೆ ಬೃಹತ್ ಮಟ್ಟದ ಹೋರಾಕ್ಕೆ ಹೆದ್ದಾರಿ ಜಾಗೃತಿ ಸಮಿತಿ ಎಲ್ಲಾ ರೀತಿಯಲ್ಲಿ ಸಜ್ಜುಗೊಂಡಿದೆ.

ಈಗಾಗಲೇ ವಿವಿಧ ಸಂಘಸಂಸ್ಥೆಗಳು ಕೋಟದಿಂದ – ಬ್ರಹ್ಮಾವರ ತನಕ ಡಿಸೆಂಬರ್ 7ರಂದು ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ವಾಹನ ಜಾಥಾ ನಡೆಸುವುದರೊಂದಿಗೆ ಸಾಸ್ತಾನ ಟೋಲ್ ಕೇಂದ್ರದ ಬಳಿ ಬೃಹತ್ ಮಟ್ಟದ ಪ್ರತಿಭಟನಾ ಸಭೆಯನ್ನು ಆಯೋಜಿಸಲು ಸಮಿತಿ ಯೋಚಿಸಿದ್ದು ಅದರಂತೆ ಜನರಲ್ಲಿ ಪ್ರತಿಭಟನೆಯ ಉದ್ದೇಶದ ಕುರಿತು ಜಾಗೃತಿ ಮೂಡಿಸುವ ಕೆಲಸವನ್ನು ಸಮಿತಿಯ ಸದಸ್ಯರು ಮಾಡುತ್ತಿದ್ದಾರೆ.

ಸಮಿತಿಯ ಮನವಿಗೆ ಸ್ಪಂದಿಸಿದ ಕೋಟ-ಬ್ರಹ್ಮಾವರ ಭಾಗದ ಹಲವಾರು ಸಂಘಸಂಸ್ಥೆಗಳು ಹಾಗೂ ವೈಯುಕ್ತಿಕವಾಗಿ ಹಲವಾರು ಮಂದಿ ಪ್ರತಿಭಟನೆ ಮತ್ತು ಬಂದ್ ಗೆ ಬೆಂಬಲ ಸೂಚಿಸಿವೆ.

ಅಂದು ನಡೆಯುವ ಪ್ರತಿಭಟನೆಗೆ ಹೆಜಮಾಡಿ ಟೋಲ್ವಿರೋಧಿ ಹೋರಾಟ ಸಮಿತಿ ಕೂಡ ಬೆಂಬಲ ಸೂಚಿಸಿದೆ. ಈ ಕುರಿತು ಮಂಗಳವಾರ ಪಡುಬಿದ್ರಿಯ ನಾರಾಯಣ ಗುರು ಸಭಾಗೃಹದಲ್ಲಿ ಸಂಜೆ ನಡೆದ ಸಮಾಲೋಚನಾ ಸಭೆಯಲ್ಲಿ ಸಾಸ್ತಾನದಲ್ಲಿ ನಡೆಯುವ ಹೋರಾಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವುದು. ಬೇಡಿಕೆ ಈಡೇರದಿದ್ದಲ್ಲಿ ಸಾಸ್ತಾನ ಹಾಗೂ ಹೆಜಮಾಡಿ ಟೋಲ್ವಿರೋಧಿ ಹೋರಾಟಗಾರರು ಜಂಟಿಯಾಗಿ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲು ನಿರ್ಧರಿಸಲಾಯಿತು.

ಈ ವರೆಗೆ ಡಿಸೆಂಬರ್ 7ರಂದು ಸಾಸ್ತಾನದಲ್ಲಿ ನಡೆಯುವ ಟೋಲ್ ವಿರೋಧಿ ಪ್ರತಿಭಟನೆಗೆ ಹೆಜಮಾಡಿ ಟೋಲ್ ಹೋರಾಟ ಸಮಿತಿ, ಕೆಥೊಲಿಕ್ ಸಭಾ ಕುಂದಾಪುರ ವಲಯ, ರೋಟರಿ ಕ್ಲಬ್ ಸಾಸ್ತಾನ – ಹಂಗಾರಕಟ್ಟೆ, ಸಾಸ್ತಾನ ಬಿಲ್ಲವ ಸಂಘದ ಮಹಿಳಾ ಘಟಕ, ಹಿಂದೂ ಜಾಗರಣಾ ವೇದಿಕೆ ಕೋಟ, ಭಗತ್ ಸಿಂಗ್ ಕ್ರಾಂತಿಕಾರಿ ಬಳಗ ಕೋಟ, ಮಿತ್ರ ಸಂಗಮ ಬೀಜಾಡಿ – ಗೋಪಾಡಿ ಸನ್ ಶೈನ್ ಗೆಳೆಯರ ಬಳಗ ಅಚ್ಲಾಡಿ, ವಡ್ಡರ್ಸೆ ಫ್ರೆಂಡ್ಸ್ ವಡ್ಡರ್ಸೆ, ಜೆಸಿಐ ಸಾಸ್ತಾನ ವೈಬ್ರೆಂಟ್, ಜೆಸಿಐ ಕೋಟ ಬ್ರಿಗೇಡಿಯರ್, ಶ್ರೀ ಅಘೋರೇಶ್ವರ ಕಲಾರಂಗ (ರಿ)ಕಾರ್ತಟ್ಟು, ಜಯ ಕರ್ನಾಟಕ ಸಂಘಟನೆ ಉಡುಪಿ ಜಿಲ್ಲೆ, ಮಹಾಲಿಂಗೇಶ್ವರ ಯುವಕ ಮಂಡಲ ಉಳ್ತೂರು, ಟಿಪ್ಪರ್ ಮಾಲೀಕರ ಸಂಘ ಕುಂದಾಪುರ/ಬ್ರಹ್ಮಾವರ, ಪ್ರೈಮ್ ಸ್ಪೋಟ್ಸ್ ಕ್ಲಬ್ ಚೇಂಪಿ, ರೋಟರಿ ಕ್ಲಬ್ ಬ್ರಹ್ಮಾವರ, ವಿಶ್ವಕರ್ಮ ಯುವ ಸಂಘಟನೆ ಸಾಸ್ತಾನ, ಸಂತ ಅಂತೋನಿ ಕ್ಯಾಥೋಲಿಕ್ ಚರ್ಚ್ & ಸ್ಕೂಲ್ ಸಾಸ್ತಾನ, ರಿಕ್ಷಾ ಚಾಲಕರು ಮಾಲಕರು ಹಾಗೂ ಗೂಡ್ಸ್ ಚಾಲಕರು ಮಾಲಕರ ಸಂಘ, ಮಾಬುಕಳ, ಶ್ರೀ ರಕ್ತೇಶ್ವರಿ ಬಳಗ & ಮಹಿಳಾ ಬಳಗ ಪಾಂಡೇಶ್ವರ,ಕರ್ನಾಟಕ ಕ್ರೈಸ್ತ ಸಂಘಗಳ ಅಂತರಾಷ್ಟ್ರೀಯ ಒಕ್ಕೂಟ ಕುಂದಾಪುರ ವಲಯ, ಪಂಚವರ್ಣ ಯುವಕ ಮಂಡಳ ಕೋಟ, ಗಿಳಿಯಾರು ಯುವಕ ಮಂಡಲ ಗಿಳಿಯಾರು ಕೆಥೊಲಿಕ್ ಸಭಾ ಸಾಸ್ತಾನ ಘಟಕ, ಬಿಲ್ಲವ ಯುವ ವೇದಿಕೆ ಪಾಂಡೇಶ್ವರ, ಬಾಂಧವ್ಯ ಬ್ಲಡ್ ಉಡುಪಿ ಕುಂದಾಪುರ ವಿಭಾಗ, ನಿಸರ್ಗ ಫ್ರೆಂಡ್ಸ್ ಗಿಳಿಯಾರು, ಬಾರಿಕೆರೆ ಯುವಕ ಮಂಡಲ ( ರಿ.) ಕೋಟ ಉಡುಪಿ ಜಿಲ್ಲೆ, ಗುಂಡ್ಮಿ ಆಟೋ ಚಾಲಕರು& ಮಾಲಕರು& ಜೀವನ್ ಪ್ರೆಂಡ್ಸ್& ಹಿಂದೂ ಜಾಗರಣ ವೇದಿಕೆ ಗುಂಡ್ಮಿ, ಬ್ರಹ್ಮಾವರ ಟ್ಯಾಕ್ಸಿ ಮತ್ತು ಮ್ಯಾಕ್ಸಿ ಕ್ಯಾಬ್ ಚಾಲಕ ಮಾಲಕರ ಸಂಘ , ಬ್ರಹ್ಮಾವರ, ಸೈoಟ್ ಥೋಮಸ್ ಓರ್ಥೋಡಾಕ್ಸ್ ಸಿರಿಯನ್ ಯುವಕ ಸಂಘ ಸಾಸ್ತಾನ, V9 ನೇಚರ್ ಕ್ಲಬ್ ,ಬ್ರಹ್ಮಾವರ, ಸಂಗಮ್ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಕ್ಲಬ್ ಕಾವಡಿ, ರೈಲು ಹಿತರಕ್ಷಣಾ ಸಮಿತಿ ಕುಂದಾಪುರ, ಕರ್ನಾಟಕ ರಾಜ್ಯ ಟೈಲರ್ ಅಸ್ಸೊಸಿಯೆಷನ್ ವಲಯ ಸಮಿತಿ ಸಾಸ್ತಾನ ಹಂಗಾರಕಟ್ಟೆ, ರೋಟರಿ ಕ್ಲಬ್ ಕೋಟೇಶ್ವರ, ಟ್ಯಾಲೆಂಟ್ ಫ್ರೆಂಡ್ಸ್ ಗುಳ್ಳಾಡಿ, ಉಡುಪಿ ಜಿಲ್ಲಾ ಟ್ಯಾಕ್ಸಿಮೆನ್ಸ್ ಮತ್ತು ಮ್ಯಾಕ್ಸಿಕ್ಯಾಬ್ ಅಸೋಸಿಯೇಷನ್ (ರಿ) ಉಡುಪಿ ಜಿಲ್ಲೆ, ಬಿಲ್ಲವ ಸಂಗ ಗೋಳಿಗರಡಿ, ಸಾಸ್ತಾನ, ಸಾಲಿಕೇರಿ ಫ್ರೆಂಡ್ಸ್ ಸಾಲಿಕೇರಿ, ವಿಶ್ವಕರ್ಮ ಫ್ರೆಂಡ್ಸ್ , ಚೇoಪಿ, ಸವಿತಾ ಸಮಾಜ ಸಾಸ್ತಾನ , ಆಶಿಯಾನ ಶಟಲ್ ಫ್ರೆಂಡ್ಸ್, ಪಾಂಡೇಶ್ವರ, ಕೋಟತಟ್ಟು ಮುಸ್ಲಿಂ ಜಮತ್ ಬಾಂಧವರು, ಬಿಲ್ಲವ ಸಂಘ ಬಾಲ್ಕುದ್ರು ಹಂಗಾರಕಟ್ಟ, ಗೂಡ್ಸ್ ವಾಹನ ಚಾಲಕರು ಹಾಗೂ ಮಾಲಕರು, ಸಾಸ್ತಾನ, ಐಸಿವೈಎಂ, ಸಂತ ಅಂತೋನಿ ಕ್ಯಾಥೊಲಿಕ್ ಚರ್ಚ್, ಸಾಸ್ತಾನ, ಸರ್ವೋದಯ ಯುವಕ ಮಂಡಲ( ರಿ )ಹಂಗಾರಕಟ್ಟೆ, ಗೂಡ್ಸ್ ವಾಹನ ಚಾಲಕರು ಹಾಗೂ ಮಾಲಕರು ಟೂರಿಸ್ಟ್ ಚಾಲಕರು ಹಾಗೂ ಮಾಲೀಕರು, ಸಾಲಿಗ್ರಾಮ, ಶ್ರೀ ದೇವಿ ಗೆಳೆಯೆರ ಬಾಲಗ ಬಾಲ್ಕುದ್ರು, ಐರೋಡಿ, ಬಾಳೆಬೆಟ್ಟು ಫ್ರೆಂಡ್ಸ್ ಬಾಳೆಬೆಟ್ಟು, ಮಣೂರು, ಮಾನಸ ಫ್ರೆಂಡ್ಸ್ ಕಾರ್ಕಡ, ಸ್ನೇಹ ಫ್ರೆಂಡ್ಸ್ ಕಾರ್ಕಡ ಅಖಿಲ ಕರ್ನಾಟಕ ಬತ್ತಡರ ಸಮಾಜ (ರಿ) ಕೋಟ, ಬ್ರಹ್ಮ ಬೈದರ್ಕಳ ಬಿಲ್ಲವ ಸೇವಾ ಸಂಘ, ಗೋಳಿಗರಡಿ, ಸಾಸ್ತಾನ, ಅನ್ಯೋನ್ಯತಾ ರಿಕ್ಷಾ ಚಾಲಕ ಮತ್ತು ಮಾಲಕರ ಸಂಘ . ಸಾಸ್ತಾನ, ಬಾಲ್ಕುದ್ರು ಹಿತ ರಕ್ಷಣಾ ಸಮಿತಿ, ಹಂಗಾರಕಟ್ಟೆ, ಪಡುಕರೆ ಫ್ರೆಂಡ್ಸ್ (ರಿ) ಪಡುಕರೆ, ಸಂಚಲನ (ರಿ) ಉಡುಪಿ, ಕಿಕ್ ಸ್ಟಾರ್ಸ್, ಹಂದಾಡಿ, ಶ್ರೀ ಗುರು ಫ್ರೆಂಡ್ಸ್ ಸಾಲಿಗ್ರಾಮ., ಜೆಸಿಐ ಸಾಲಿಗ್ರಾಮ ವಡ್ಡರ್ಸೆ ಸಿಟಿ, ವಾಹನ ಚಾಲಕರು ಮಾಲಕರು ಟೂರಿಸ್ಟ್ ಚಾಲಕರು ಮಾಲಕರು ಸಾಲಿಗ್ರಾಮ, ಲಯನ್ಸ್ ಕ್ಲಬ್ ಬ್ರಹ್ಮಾವರ- ಬಾರಕೂರು, ಹೋಲಿ ಫ್ಯಾಮಿಲಿ ಚರ್ಚ್ & ನಿರ್ಮಲ ಹೈಸ್ಕೂಲ್, ಬ್ರಹ್ಮಾವರ, ಕ್ಯಾಥೊಲಿಕ್ ಸಭಾ ಉಡುಪಿ ಪ್ರದೇಶ ಉಡುಪಿ ಧರ್ಮಪ್ರಾಂತ್ಯ, ಜಿಲ್ಲಾ ಜಾತ್ಯಾತೀತ ಜನತಾ ದಳ ಸೇರಿದಂತೆ ಇನ್ನೂ ಹಲವಾರು ಸಂಘ ಸಂಸ್ಥೆಗಳು ತಮ್ಮ ಬೆಂಬಲವನ್ನು ಸೂಚಿಸಿವೆ.


Spread the love