ತಾಯಿ, ಮಕ್ಕಳ ಹತ್ಯೆ ಪ್ರಕರಣ; ಉಸ್ತುವಾರಿ ಸಚಿವೆಯ ಮೌನಕ್ಕೆ ಸಾರ್ವಜನಿಕರ ಅಸಮಾಧಾನ

Spread the love

ತಾಯಿ, ಮಕ್ಕಳ ಹತ್ಯೆ ಪ್ರಕರಣ; ಉಸ್ತುವಾರಿ ಸಚಿವೆಯ ಮೌನಕ್ಕೆ ಸಾರ್ವಜನಿಕರ ಅಸಮಾಧಾನ

ಉಡುಪಿ: ರಾಜ್ಯದಲ್ಲಿ ಸುದ್ದಿ ಮಾಡಿರುವ ನೇಜಾರು ತಾಯಿ ಮತ್ತು ಮೂವರು ಮಕ್ಕಳ ಬರ್ಬರ ಕೊಲೆಯ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ನಿರ್ಲಕ್ಷ್ಯ ವಹಿಸಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ .

ಉಸ್ತುವಾರಿ ಸಚಿವರು ಮೂಲತಃ ಬೆಳಗಾವಿಯವರಾಗಿದ್ದು, ಕೂಡಲೇ ಭೇಟಿ ನೀಡುವುದು ಅಸಾಧ್ಯವಾಗಿದ್ದರೂ, ಇಷ್ಟು ದೊಡ್ಡ ಘಟನೆಯ ಬಗ್ಗೆ ಕನಿಷ್ಟ ಪಕ್ಷ ಒಂದು ಹೇಳಿಕೆಯನ್ನಾದರೂ ನೀಡಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಯಿ ಮಕ್ಕಳ ಹತ್ಯೆಯಿಂದ ಇಡೀ ಉಡುಪಿ ಬೆಚ್ಚಿ ಬಿದ್ದಿದೆ. ಆದರೆ ಜಿಲ್ಲೆಯ ಉಸ್ತುವಾರಿ ಸಚಿವರು ಈ ಬಗ್ಗೆ ಯಾವುದೇ ಪ್ರತಿಕ್ರಿಯೆಯನ್ನೇ ನೀಡದಿರುವುದು ಜಿಲ್ಲೆಯ ಜನರ ಬೇಸರಕ್ಕೆ ಕಾರಣವಾಗಿದೆ ಎನ್ನಲಾಗಿದೆ..


Spread the love