ತಿರುಪತಿ ಲಡ್ಡಿಗೆ ದನದ ಕೊಬ್ಬು, ಮೀನಿನೆಣ್ಣೆ – ಹಿಂದೂ ಭಾವನೆಗೆ ಧಕ್ಕೆ ತಂದವರಿಗೆ ಕಠಿಣ ಶಿಕ್ಷೆಗೆ ಆಗ್ರಹ

Spread the love

ತಿರುಪತಿ ಲಡ್ಡಿಗೆ ದನದ ಕೊಬ್ಬು, ಮೀನಿನೆಣ್ಣೆ – ಹಿಂದೂ ಭಾವನೆಗೆ ಧಕ್ಕೆ ತಂದವರಿಗೆ ಕಠಿಣ ಶಿಕ್ಷೆಗೆ ಆಗ್ರಹ

ಉಡುಪಿ: ವಿಶ್ವ ಹಿಂದೂ ಪರಿಷದ್ ತೀವ್ರ ಖಂಡನೆ. ಈ ಪ್ರಕರಣವನ್ನು CBI ಮೂಲಕ ತನಿಖೆ ನಡೆಸಿ ಹಿಂದೂ ಭಾವನೆಗೆ ಧಕ್ಕೆ ತಂದವರಿಗೆ ಕಠಿಣ ಶಿಕ್ಷೆಗೆ  ವಿಶ್ವ ಹಿಂದೂ ಪರಿಷದ್ ಪ್ರಾಂತ ಸಹ ಕಾರ್ಯದರ್ಶಿ  ಶರಣ್ ಕುಮಾರ ಪಂಪವೆಲ್ ಆಗ್ರಹಿಸಿದ್ದಾರೆ

ಪ್ರಪಂಚದಾದ್ಯಂತ  ತಿರುಪತಿ ವೆಂಕಟರಮಣನ ಮೇಲೆ ಅತೀವ ಭಕ್ತಿ ಭಾವ ಇದ್ದು ಅಲ್ಲಿಯ ಪ್ರಸಾದವನ್ನು ತಿರುಪತಿ ದೇವರ ಪ್ರತೀಕದಂತೆ ನೋಡುತ್ತಾರೆ. ಪ್ರಸಾದವನ್ನು  ದನದ ಕೊಬ್ಬು ಮತ್ತು ಮೀನಿನೆಣ್ಣೆ ಉಪಯೋಗಿಸಿ ತಯಾರಿಸಿದ್ದು  ಸಮಸ್ತ ಹಿಂದೂ ಸಮಾಜಕ್ಕೆ ಅತೀವ ನೋವು ತಂದಿದೆ. ಇದನ್ನು ವಿಶ್ವ ಹಿಂದೂ ಪರಿಷದ್ ತೀವ್ರವಾಗಿ ಖಂಡಿಸುತ್ತದೆ.

ಇದಕ್ಕೆ ಕಾರಣಕರ್ತರಾಗಿದ್ದ  ಹಿಂದಿನ ಮುಖ್ಯಮಂತ್ರಿ ಜಗನ್ ರವರ ಸರಕಾರದಲ್ಲಿ ಯಾರೆಲ್ಲ ಭಾಗಿಯಾಗಿದ್ದಾರೆಂದು ಸಿ ಬಿ ಐ ಮೂಲಕ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ವಿಶ್ವ ಹಿಂದೂ ಪರಿಷದ್ ಅಗ್ರಹಿಸುತ್ತದೆ.

ಈ ವಿಚಾರವನ್ನು ಬೆಳಕಿಗೆ ತಂದಿರುವ ಹಾಗೂ ಬದಲಾವಣೆ ತಂದು ದೇವರಿಗೆ ಶುದ್ಧ ಲಾಡು ಅರ್ಪಿಸಲು ವ್ಯವಸ್ಥೆ ಮಾಡಿದ ಈಗಿನ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡುರವರಿಗೆ  ಹೃತ್ಪೂರ್ವಕ ಅಭಿನಂದನೆಗಳನ್ನು ವಿಶ್ವ ಹಿಂದೂ ಪರಿಷದ್ ಸಲ್ಲಿಸುತ್ತದೆ


Spread the love
Subscribe
Notify of

0 Comments
Inline Feedbacks
View all comments