ತೊಕ್ಕೊಟ್ಟು ಐಸ್ ಕ್ರೀಮ್ ಪಾರ್ಲರ್ ವೈಟರ್ ಆತ್ಮಹತ್ಯೆ

Spread the love

ತೊಕ್ಕೊಟ್ಟು ಐಸ್ ಕ್ರೀಮ್ ಪಾರ್ಲರ್ ವೈಟರ್ ಆತ್ಮಹತ್ಯೆ

ಉಳ್ಳಾಲ: ಐಸ್ ಕ್ರೀಮ್ ಪಾರ್ಲರ್ ಒಂದರ ವೈಟರ್ ಆಗಿದ್ದ ಕೊಡಗು ಜಿಲ್ಲೆ ಸೋಮವಾರಪೇಟೆಯ ಬೆಳ್ಳಾರೆ ಹಳ್ಳಿ ನಿವಾಸಿ ಯೋಗೇಶ್ (31) ಎಂಬಾತ ಪಿಲಾರ್ ನ ಗೋಡೌನ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಗೋಡೌನ್ ನ ಅಂಗಳದಲ್ಲಿ ಸ್ಥಳೀಯ ಯುವಕರು ಬೆಳಿಗ್ಗೆ ಶಟಲ್ ಆಡುತ್ತಿದ್ದಾಗ ಕಿಟಕಿ ತೆರೆದು ಯೋಗೇಶ್ ನೋಡಿದ್ದರು. ಯುವಕರು ತೆರಳಿದ ಬಳಿಕ ಯೋಗೇಶ್ ಡೆತ್ ನೋಟ್ ಬರೆದು ಕೃತ್ಯ ಎಸಗಿದ್ದಾರೆ.

ಕಳೆದ ಏಳು ವರುಷದಿಂದ ತೊಕ್ಕೊಟ್ಟುವಿನ ರಾಯನ್ಸ್ ಕ್ರೀಮ್ ಪಾರ್ಲರಲ್ಲಿ ಕೆಲಸಕ್ಕಿದ್ದ ಅವಿವಾಹಿತ ಯೋಗೇಶ್ ಎಲ್ಲರಿಗೂ ಪರಿಚಿತನಾಗಿದ್ದ.ಪಿಲಾರಿನ ಗೋಡೌನಲ್ಲೇ ಯೋಗೇಶ್ ಸ್ನೇಹಿತರೊಂದಿಗೆ ವಾಸವಿದ್ದ.

ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿ ಮೃತ ದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.


Spread the love