ತೊಕ್ಕೊಟ್ಟು ಬಳಿ ಯುವಕನೋರ್ವನ ಕೊಲೆ

ತೊಕ್ಕೊಟ್ಟು ಬಳಿ ಯುವಕನೋರ್ವನ ಕೊಲೆ

ಮಂಗಳೂರು : ಹೊರವಲಯದ ತೊಕ್ಕೊಟ್ಟು ಬಳಿ ಯುವಕನೋರ್ವನ ಕೊಲೆಯಾದ ಘಟನೆ ಇಂದು ರಾತ್ರಿ ವೇಳೆ ನಡೆದಿದೆ.

ಮೃತರನ್ನು ಕುಂಬ್ಳೆ ಪುತ್ತಿಗೆ ನಿವಾಸಿ ಸುದರ್ಶನ್ ಎಂದು ಗುರುತಿಸಲಾಗಿದೆ.

ಅವರ ಕಿಸೆಯಲ್ಲಿ ಗುರುತಿನ ಚೀಟಿಯೊಂದು ಪೊಲೀಸರಿಗೆ ಸಿಕ್ಕಿದ್ದು, ಅದರಲ್ಲಿ ಕುಂಬ್ಳೆ ಪುತ್ತಿಗೆ ನಿವಾಸಿ ಎಂದು ಇರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

ತೊಕ್ಕೊಟ್ಟು ಲಾಡ್ಜ್ ಒಂದರಲ್ಲಿ ಕೆಲಸ ಮಾಡುತ್ತಿರುವ ರಕ್ಷಿತ್ ಎಂಬಾತ ಕೊಲೆ ಮಾಡಿರುವ ಮಾಹಿತಿ ಪೊಲೀಸರಿಗೆ ಲಭಿಸಿದೆ. ರಕ್ಷಿತ್ ಗೆ ಸಂಬಂಧಿಸಿದ ವೀಡಿಯೊ ಒಂದನ್ನು ಸುದರ್ಶನ್ ವೈರಲ್ ಮಾಡಿದ್ದ ಎಂದು ಹೇಳಲಾಗುತ್ತಿದೆ. ಈ ಕಾರಣಕ್ಕೆ ರಕ್ಷಿತ್ ಕೊಲೆ ಮಾಡಿರುವ ಬಗ್ಗೆ ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ. ಸುದರ್ಶನ್ ನನ್ನು ಬೇರೆ ಸ್ಥಳದಲ್ಲಿ ಕೊಲೆ ಮಾಡಿ ನಂತರ ಇಲ್ಲಿಗೆ ತಂದು ಹಾಕಿರುವ ಸಂಶಯ ಪೊಲೀಸರು ವ್ಯಕ್ತಪಡಿಸಿದ್ದಾರೆ.

ಉಳ್ಳಾಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.