ತೊಕ್ಕೊಟ್ಟು – ವ್ಯಕ್ತಿಯನ್ನು ಬರ್ಬರವಾಗಿ ಕಡಿದು ಕೊಲೆ

ತೊಕ್ಕೊಟ್ಟು – ವ್ಯಕ್ತಿಯನ್ನು ಬರ್ಬರವಾಗಿ ಕಡಿದು ಕೊಲೆ

ಮಂಗಳೂರು: ಮನೆಯೊಳಗೆ ವ್ಯಕ್ತಿಯೊಬ್ಬರನ್ನು ಕಡಿದು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ನಗರದ ತೊಕ್ಕೊಟ್ಟು ಚೆಂಬುಗುಡ್ಡೆಯಲ್ಲಿ ಬುಧವಾರ ಸಂಭವಿಸಿದೆ.

ಕೊಲೆಯಾದ ವ್ಯಕ್ತಿಯನ್ನು ತೊಕ್ಕೊಟ್ಟು ಚೆಂಬುಗುಡ್ಡೆ ನಿವಾಸಿ ನಾರಾಯಣ(46) ಎಂದು ಗುರುತಿಸಲಾಗಿದೆ.
ಮೃತ ವ್ಯಕ್ತಿ ನಾರಾಯಣ ಅವರನ್ನು ಮೈದುನ ರಾಜೇಶ್ ಕೊಲೆ ಮಾಡಿದ್ದಾರೆ ಎಂದು ಶಂಕಿಸಲಾಗಿದೆ.

ಸ್ಥಳಕ್ಕೆ ಉಳ್ಳಾಲ ಪಿಐ ಗೋಪಿಕೃಷ್ಣ ,ಪಿಎಸ್ಐ ಗುರು ಕಾಂತಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.