ದಕ ಜಿಲ್ಲಾ ಯುವ ಜನತಾದಳ ವತಿಯಿಂದ ದೇವೆಗೌಡರ ಹುಟ್ಟುಹಬ್ಬ ಆಚರಣೆ

ದಕ ಜಿಲ್ಲಾ ಯುವ ಜನತಾದಳ ವತಿಯಿಂದ ದೇವೆಗೌಡರ ಹುಟ್ಟುಹಬ್ಬ ಆಚರಣೆ

ಮಂಗಳೂರು: ದ.ಕ. ಜಿಲ್ಲಾ ಯುವ ಜನತಾ ದಳ ವತಿಯಿಂದ ಮಣ್ಣಿನ ಮಗ, ಮಾಜಿ ಪ್ರಧಾನಿ, ಜನತಾದಳ ವರಿಷ್ಟರಾದ ಹೆಚ್.ಡಿ. ದೇವೇಗೌಡ ರವರ ಹುಟ್ಟುಹಬ್ಬವನ್ನು ದಕ್ಷಿಣ ಕನ್ನಡ ಜಿಲ್ಲಾ ಯುವ ಜನತಾ ದಳ ಜಿಲ್ಲಾಧ್ಯಕ್ಷ ಅಕ್ಷಿತ್ ಸುವರ್ಣ ರವರ ನೇತೃತ್ವದಲ್ಲಿ ಕುದ್ರೊಳಿ ಶ್ರೀ ಗೊಕರ್ಣನಾಥೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜಾರ್ಚನೆ ನೆರವೇರಿಸಿ ಅವರ ಆರೋಗ್ಯ ವೃದ್ದಿಸಿ ಇನ್ನಷ್ಟು ಜನಸೇವೆ ಮಾಡುವ ಶಕ್ತಿ ಮತ್ತು ಉತ್ಸಾಹ ಅವರಿಗೆ ನಿಡಲಿ ಎಂದು ಪ್ರಾರ್ಥಿಸಿ ಆಚರಿಸಲಾಯಿತು ಹಾಗೂ ಜಿಲ್ಲೆಯಲ್ಲಿ ಹಿಂದೆಂದಿಗಿಂತಲೂ ಅತಿ ಹೆಚ್ಚು ತಾಪಮಾನವಿದ್ದು ಜನರು ಕಷ್ಟಪಡುತ್ತಿದ್ದು ಸಕಾಲದಲ್ಲಿ ಮಳೆಯಾಗಲು ಪ್ರಾರ್ಥಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲೆಯ ಯುವ ನಾಯಕರುಗಳಾದ ಜಿಲ್ಲಾ ಉಪಾಧ್ಯಕ್ಷ ಮೊಹಮ್ಮದ್ ಆಸೀಫ್, ಜಿಲ್ಲಾ ಸಂಘಟನ ಕಾರ್ಯದರ್ಶಿ ಮೊಹಮ್ಮದ್ ಫೈಝಲ್,ಮಂಗಳೂರು ಉತ್ತರ ವಿ.ಸಭಾ ಕ್ಷೇತ್ರ ಯುವ ಅಧ್ಯಕ್ಷ ರತೀಶ್ ಕರ್ಕೇರ, ಉಪಾಧ್ಯಕ್ಷ ಹಿತೇಶ್ ರೈ, ವಿಧ್ಯಾರ್ಥಿ ಜನತಾದಳ ಜಿಲ್ಲಾಧ್ಯಕ್ಷರಾದ ಸಿನಾನ್ ಮತ್ತು ಇತರ ಕಾರ್ಯಕರ್ತರುಗಳು ಉಪಸ್ತಿತರಿದ್ದರು.