ದಕ ಜಿಲ್ಲೆಯಲ್ಲಿ ಒಂದೇ ದಿನ ಕೊರೊನಾ ಗೆ ಮೂರು ಬಲಿ – ಮೃತರ ಸಂಖ್ಯೆ 29 ಕ್ಕೆ ಏರಿಕೆ

Spread the love

ದಕ ಜಿಲ್ಲೆಯಲ್ಲಿ ಒಂದೇ ದಿನ ಕೊರೊನಾ ಗೆ ಮೂರು ಬಲಿ – ಮೃತರ ಸಂಖ್ಯೆ 29 ಕ್ಕೆ ಏರಿಕೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾ ಗೆ ಬುಧವಾರ ಒಂದೇ ದಿನ ಮೂರು ಮಂದಿ ಬಲಿಯಾಗಿದ್ದು ಒಟ್ಟು ಮೃತರ ಸಂಖ್ಯೆ 29 ಕ್ಕೆ ಏರಿಕೆಯಾಗಿದೆ

ಬುಧವಾರ ಬೆಳಿಗ್ಗೆ ಭಟ್ಕಳ ಮೂಲದ 62 ವರ್ಷದ ವೃದ್ದೆಯೊಬ್ಬರು ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಉಳ್ಳಾಲದ 57 ವರ್ಷದ  ಮಹಿಳೆಯೋರ್ವರು ರಕ್ತದೊತ್ತಡದ ಚಿಕಿತ್ಸೆಗಾಗಿ ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲಾಗಿದ್ದು ಮೃತಪಟ್ಟಿದ್ದಾರೆ.  ಅಲ್ಲದೆ ಪುತ್ತೂರಿನ 32 ವರ್ಷದ ಬಾಣಂತಿಯೋರ್ವರು ಕೂಡ ಕೋವಿಡ್ ನಿಂದ ಮೃತಪಟ್ಟಿದ್ದು ಆಕೆ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು.

ಒಟ್ಟಾರೆಯಾಗಿ ಬುಧವಾರ ಮೂವರು ಕೊರೋನಾಗೆ ಬಲಿಯಾಗುವುದರೊಂದಿಗೆ ಜಿಲ್ಲೆಯಲ್ಲಿ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ 29 ಕ್ಕೆ ಏರಿಕೆಯಾಗಿದೆ.


Spread the love