ದಕ ಜಿಲ್ಲೆಯಲ್ಲಿ ಕೊರೋನಾಗೆ ಎರಡನೇ ಬಲಿ – 75 ವರ್ಷದ ಮಹಿಳೆ ಮೃತ

Spread the love

ದಕ ಜಿಲ್ಲೆಯಲ್ಲಿ ಕೊರೋನಾಗೆ ಎರಡನೇ ಬಲಿ – 75 ವರ್ಷದ ಮಹಿಳೆ ಮೃತ

ಮಂಗಳೂರು: ಬಂಟ್ವಾಳ ತಾಲೂಕಿನ ಸುಮಾರು 75 ವರ್ಷ ಪ್ರಾಯದ ಮಹಿಳೆಯೊಬ್ಬರು ಗುರುವಾರ ವೆನ್ಲಾಕ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು ಮಹಾ ಮಾರಿ ಕೊರೊನಾಗೆ ದಕ ಜಿಲ್ಲೆಯಲ್ಲಿ ಎರಡನೇ ಜೀವ ಬಲಿಯಾಗಿದೆ.

ರವಿವಾರ ಬಂಟ್ವಾಳ ತಾಲೂಕಿನ 45 ವರ್ಷ ವಯಸ್ಸಿನ ಮಹಿಳೆ ಮೃತಪಟ್ಟಿದ್ದು, ಆಕೆಯ 75 ವರ್ಷ ಅತ್ತೆಯಲ್ಲಿ ಕೂಡ ಕೊರೋನಾ ಸೋಂಕು ಧೃಡಪಟ್ಟಿತ್ತು, ಅವರನ್ನು ವೆನ್ಲಾಕ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಗುರುವಾರ ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟಿದ್ದಾರೆ.


Spread the love