ದನ, ಬೈಕ್ ಕಳ್ಳತನ ನಾಲ್ವರ ಬಂಧನ

Spread the love

ದನ, ಬೈಕ್ ಕಳ್ಳತನ ನಾಲ್ವರ ಬಂಧನ

ಮಂಗಳೂರು: ದನಕಳ್ಳತನ ಮತ್ತು ಬೈಕ್ ಕಳವು ಪ್ರಕರಣಕ್ಕೆ ಸಂಬಂಧಿಸಿ ಕಂಕನಾಡಿ ಪೋಲಿಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ,

ಬಂಧಿತರನ್ನು ಬಜಾಲ್ ನಿವಾಸಿ ಮೊಹಮ್ಮದ್ ಅಜಾಬ್, ಪೆರ್ಮನ್ನೂರು ನಿವಾಸಿ ಹಿದಾಯತ್, ಮುತ್ತಲಿಬ್, ಮತ್ತು ಅಬ್ದುಲ್ ಕರೀಮ್ ಎಂದು ಗುರುತಿಸಲಾಗಿದೆ.

ಕಂಕನಾಡಿ ಪೋಲಿಸ್ ಠಾಣಾ ವ್ಯಾಪ್ತಿಯ ಜಪ್ಪಿನಮೊಗರು ಮತ್ತು ಕಪಿತಾನಿಯೋ ಬಳಿಯ ಮನೆಗಳಿಂದ 4 ದನಗಳು ಹಾಗೂ ಜಪ್ಪಿನಮೊಗರುವಿನ ಗ್ಯಾರೇಜಿನಿಂದ ಬೈಕುಗಳು ಕಳವಾಗಿದ್ದು ಈ ಬಗ್ಗೆ ಹುಡುಕಾಡ ನಡೆಸಿದ ಪೋಲಿಸರು ಬಂಧಿಸಿದ್ದು, ಬಂದಿತರಿಂದ 2 ಮೋಟಾರ್ ಸೈಕಲ್, ಒಂದು ಸ್ಕೂಟರ್ ವಶಪಡಿಸಿಕೊಳ್ಳಲಾಗಿದೆ, ಆರೋಪಿಗಳ ವಿರುದ್ದ ಕೊಣಾಜೆ, ಸುರತ್ಕಲ್, ಉಳ್ಳಾಲ ಉತ್ತರ ಠಾಣೆ, ಪುತ್ತೂರು ಮತ್ತು ಕಡಬ ಠಾಣೆಗಳಲ್ಲಿ ದನಕಳ್ಳತನ ಪ್ರಕರಣಗಳು ದಾಖಲಾಗಿವೆ.

ಕಾರ್ಯಾಚರಣೆಯಲ್ಲಿ ಪೋಲಿಸ್ ಆಯುಕ್ತ ಚಂದ್ರಶೇಖರ್, ಮಂಗಳೂರು ನಗರ ಕಾನೂನು ಮತ್ತು ಸುವ್ಯವಸ್ಥೆ ಆಯುಕ್ತ ಶಾಂತರಾಜು, ಮಂಗಳೂರು ನಗರ ಅಪರಾಧ ಮತ್ತು ಸಂಚಾರ ಉಪಪೋಲಿಸ್ ಆಯುಕ್ತ ಸಂಜೀವ್ ಪಾಟೀಲ್, ಸಹಾಯಕ ಪೋಲಿಸ್ ಆಯುಕ್ತೆ ಶೃತಿ ಇವರ ಮಾರ್ಗದರ್ಶನದಲ್ಲಿ ಕಂಕನಾಡಿ ನಗರ ಪೋಲಿಸ್ ನಿರೀಕ್ಷಕರಾದ ರವಿ ನಾಯ್ಕ್, ಪಿಎಸ್ ಐ ಶಂಕರ್ ಪಾಟಾಳಿ, ಎಎಸ್ ಐ ಭಾಸ್ಕರ್ ರಾವ್, ಹಾಗೂ ಇತರರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು,


Spread the love

1 Comment

  1. “ಮೊಹಮ್ಮದ್ ಅಜಾಬ್, ಹಿದಾಯತ್, ಮುತ್ತಲಿಬ್, ಮತ್ತು ಅಬ್ದುಲ್ ಕರೀಮ್ ” – report naming the culprits in police custody for stealing cattle and motorbikes.

    When will media wake up and ask a few tough questions on crimes committed by certain sections of our society? I know how quickly media jumps into action when it comes to lecturing Sanathana dharma followers on a wide range of issues!!

Comments are closed.